ADVERTISEMENT

ಕಸದ ತೊಟ್ಟಿಯಲ್ಲ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 19:30 IST
Last Updated 9 ಮಾರ್ಚ್ 2017, 19:30 IST

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದೆ. ಇಂತಹ ನಿರ್ಣಾಯಕ ಸಮಯದಲ್ಲಿ, ವಿದ್ಯಾರ್ಥಿಗಳು ಧೈರ್ಯಗೆಡದೆ ಕ್ರಮಬದ್ಧವಾಗಿ ಓದುವ ಕಡೆ ಗಮನಹರಿಸುವಂತೆ ಪೋಷಕರು ನೋಡಿಕೊಳ್ಳಬೇಕಾಗಿದೆ.

ಅತಿ ಹೆಚ್ಚು ಅಂಕ ಗಳಿಸುವಂತೆ ಮಕ್ಕಳ ಮೇಲೆ ಒತ್ತಡ ಹಾಕದೆ, ಅವರು ನಿರಾತಂಕವಾಗಿ ಪರೀಕ್ಷೆಗೆ ಅಣಿಯಾಗಲು ಹಾಗೂ ಬರೆಯಲು ಸ್ಫೂರ್ತಿ ನೀಡಬೇಕಾಗಿದೆ.

ಇಂದಿನ ಸ್ಪರ್ಧಾತ್ಮಕ ಯುಗದ ಭರದಲ್ಲಿ ಮಕ್ಕಳ ಮೇಲೆ ಪೋಷಕರು ಅತಿಯಾದ ಒತ್ತಡ ಹೇರುವುದು ಸಾಮಾನ್ಯ ಸಂಗತಿಯಾಗಿದೆ. ಮಕ್ಕಳ ಮೆದುಳು ಭವಿಷ್ಯತ್ತಿನ ರೂಪುರೇಷೆಗಳನ್ನು ಅರಳಿಸುವ ಚಿಲುಮೆಯೇ ಹೊರತು, ಒತ್ತಾಯಪೂರ್ವಕ ನಿರ್ಣಯಗಳನ್ನು ತುಂಬಿಸುವ ಕಸದ ತೊಟ್ಟಿಯಲ್ಲ ಎಂಬುದನ್ನು ಪಾಲಕರು ಮತ್ತು ಶಿಕ್ಷಕರು ಅರಿಯಲಿ.
–ಶ್ರೀನಿವಾಸ ಧ. ವಾಲಿ, ಹುಬ್ಬಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.