ADVERTISEMENT

ಕ್ರಮಕ್ಕೆ ಅವಕಾಶವಿದೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST

ರಾಜ್ಯದಲ್ಲಿ ಕನಿಷ್ಠ 5ನೇ ತರಗತಿವರೆಗಾದರೂ ಕನ್ನಡ ಭಾಷೆಯೇ ಮಾಧ್ಯಮವಾಗಿರಬೇಕೆಂಬ ಬೇಡಿಕೆಗೆ  ಮಾನ್ಯತೆ ಸಿಗಲಿಲ್ಲ. ಆದರೂ ಕನ್ನಡ ಪರವಾದ ಕ್ರಮ ಕೈಗೊಳ್ಳಲು ಕೆಲವು ಅವಕಾಶಗಳು ಈಗಲೂ ಇವೆ.

ಅವೆಂದರೆ, ಕನ್ನಡವನ್ನು ಮಾಧ್ಯಮವನ್ನಾಗಿಸುವ ಬದಲು ಒಂದು ಭಾಷೆಯನ್ನಾಗಿ ಕಡ್ಡಾಯ ಮಾಡಿ, ಪದವಿ ತರಗತಿಯವರೆಗೆ ಕಲಿಸಬಹುದು. ಜೊತೆಗೆ ಸರ್ಕಾರ ಮನಸ್ಸು ಮಾಡಿದರೆ, ಸಾಹಿತ್ಯ ಪರಿಷತ್ತು ಮತ್ತು ಕನ್ನಡದ ದಿಗ್ಗಜರು ಒತ್ತಡ ತಂದರೆ ಪ್ರಾಥಮಿಕ ಶಾಲೆ 5ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಆಗುವ ಅವಕಾಶವಿದೆ. ಆದರೆ ಇಲ್ಲಿ ಯಾವ ಒತ್ತಡವೂ ಇಲ್ಲ ಕಡ್ಡಾಯವೂ ಇಲ್ಲ.

ಅದಕ್ಕಾಗಿ ಬಳಸಬಹುದಾದ ತಂತ್ರವೆಂದರೆ, ಯಾರು ಸ್ವ ಇಚ್ಛೆಯಿಂದ ಕನ್ನಡ ಮಾಧ್ಯಮಕ್ಕೆ ಬರುತ್ತಾರೋ ಅಂತಹ ಶಾಲೆಗೆ ಕೂಡಲೇ ಅನುದಾನ ಬಿಡುಗಡೆ ಮಾಡುವುದು. ಇದರಿಂದ ಉತ್ತಮ ಪ್ರೋತ್ಸಾಹ ನೀಡಿದಂತಾಗುತ್ತದೆ.  ಅನುದಾನವಿಲ್ಲದೆ ಯಾರೂ ಕನ್ನಡ ಮಾಧ್ಯಮದಲ್ಲಿ  ಶಾಲೆ ನಡೆಸಲು ಮುಂದೆ ಬರುವುದಿಲ್ಲ. ಹೀಗೆ  ಸುಪ್ರೀಂಕೋರ್ಟ್‌ ತೀರ್ಪನ್ನು ಪ್ರಶ್ನಿಸದೇ ಕನ್ನಡ ಮಾಧ್ಯಮದಲ್ಲಿ ಕಲಿಸಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.