ADVERTISEMENT

ಗುರುತಿನ ಚೀಟಿ ಸಮಸ್ಯೆ ಬಗೆಹರಿಸಿ

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:54 IST
Last Updated 2 ಮೇ 2016, 19:54 IST

ಬಿಎಂಟಿಸಿ ಬಸ್ಸಿನಲ್ಲಿ ದಿನನಿತ್ಯ ಸಾವಿರಾರು ಹಿರಿಯ ನಾಗರಿಕರು ಪ್ರಯಾಣಿಸುತ್ತಿರುವುದು ಸರಿಯಷ್ಟೆ. ಈ ಇಲಾಖೆ ಹಿರಿಯರಿಗೆ ಟಿಕೆಟ್‌ನಲ್ಲಿ ರಿಯಾಯಿತಿ ನೀಡಿದೆ. ಅದಕ್ಕೆ ಬಿಎಂಟಿಸಿ ನೀಡುವ ಫೋಟೊ ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಕೆಲವು ಹಿರಿಯ ನಾಗರಿಕರು ವೋಟರ್‌ ಐಡಿ ತೋರಿಸಿ ನಿರ್ವಾಹಕರಲ್ಲಿ ರಿಯಾಯಿತಿ ಟಿಕೆಟ್‌ ಕೇಳುತ್ತಾರೆ. ಇದನ್ನು ನಿರ್ವಾಹಕರು ಪುರಸ್ಕರಿಸುವುದಿಲ್ಲ.

ಸರ್ಕಾರದಿಂದ ಅಧಿಕೃತವಾಗಿ ವಿತರಿಸಿರುವ, ಅದರಲ್ಲಿ ಫೋಟೊ ಮತ್ತು ಹುಟ್ಟಿದ ದಿನಾಂಕ ಇರುವ ಯಾವುದೇ ದಾಖಲೆಗಳನ್ನು ಪುರಸ್ಕರಿಸಿ ಟಿಕೆಟ್‌ನಲ್ಲಿ ರಿಯಾಯಿತಿ ನೀಡುವಂತೆ ಆದೇಶವನ್ನು ಎಲ್ಲಾ ನಿರ್ವಾಹಕರಿಗೆ ನೀಡಿದರೆ ಅನುಕೂಲವಾಗುತ್ತದೆ. ಈ ನಿಯಮ ಜಾರಿಗೆ ಬಂದರೆ ವಯಸ್ಸಾದವರು ಬಸ್ಸಿನಲ್ಲಿ ಎದುರಿಸುವ ಕಷ್ಟಗಳು ತಪ್ಪುತ್ತದೆ. ಹಾಗೆಯೇ, ದಿನ ನಿತ್ಯ ಬಸ್ಸಿನಲ್ಲಿ ಆಗುವ ವಾದ ವಿವಾದಗಳೂ ನಿಲ್ಲುತ್ತವೆ. 
– ಬಿ. ರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.