ADVERTISEMENT

ಜಾಗೃತಿ ಮೂಡಿಸಬೇಕು

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST

‘ಶೋಷಣೆಯ ಅಡ್ಡೆಗಳಾದ ಸಿನಿಮಾ ಸಂಸ್ಥೆಗಳು’ (ಸಂಗತ, ಪ್ರ.ವಾ., ಜುಲೈ 19) ಲೇಖನ ಸಮಯೋಚಿತ ಮತ್ತು ಯುವಜನರು ಹಾಗೂ ಸರ್ಕಾರವನ್ನು ಎಚ್ಚರಿಸುವಂಥದ್ದು.

‘ನವೋದ್ಯಮ’ ಮತ್ತು ‘ಕೌಶಲ ಭಾರತ’ ಎಂಬ ಘೋಷಣೆಗಳ ಮರೆಯಲ್ಲಿ ಇಂಥ ಸಂಸ್ಥೆಗಳು ಜನ್ಮತಾಳಿ ಯುವಜನರನ್ನು ಸೆಳೆದು ಶೋಷಿಸುತ್ತವೆ. ಸರ್ಕಾರ ಮತ್ತು ಚಲನಚಿತ್ರ ಮಂಡಳಿ ಇಂಥವುಗಳನ್ನು ನಿಯಂತ್ರಿಸಬೇಕು. ವೇಗವಾಗಿ ಹಣ ಗಳಿಸುವ ಚಾಳಿ ಇತ್ತೀಚಿನ ದಿನಗಳಲ್ಲಿ ವಿಪರೀತವಾಗುತ್ತಿದೆ. ಹಾಗಾಗಿ ಆಕಾಂಕ್ಷಿ ವಿದ್ಯಾರ್ಥಿಗಳನ್ನು ಶೋಷಣೆಗೆ (ಕೆಲವೊಮ್ಮೆ ಅನೈತಿಕ ಚಟುವಟಿಕೆಗಳಿಗೆ) ಒಳಪಡಿಸುವುದುಂಟು. ಇಂಥ ಸಂಸ್ಥೆಗಳ ಬಗ್ಗೆ ಜನರಲ್ಲಿ ಜಾಗೃತಿ  ಮೂಡಿಸಬೇಕು.
-ಬಿ. ರಮೇಶ್, ಉತ್ತರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT