ADVERTISEMENT

ಜಿಎಸ್‌ಟಿ ಗೊಂದಲ...

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಈಗ ಎಲ್ಲರ ಚರ್ಚೆಗೆ ವಸ್ತುವಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳು ಗೊತ್ತಿಲ್ಲದವರಿಗೂ ಈ ಮೂರಕ್ಷರ ಚಿರಪರಿಚಿತ. ಇದರ ಪರ ಮತ್ತು ವಿರುದ್ಧ ಹೀಗೆ ಎರಡೂ ರೀತಿಯಲ್ಲಿ ತಮ್ಮ ವಾದವನ್ನು ವಿದ್ವತ್‌ಪೂರ್ಣವಾಗಿ ಮಂಡಿಸಿ ಎದುರಿಗಿರುವವರ ಚಪ್ಪಾಳೆ ಗಿಟ್ಟಿಸುವವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಅರ್ಧಸತ್ಯ ಹೇಳುವ ತಮ್ಮ ನಾಯಕರಿಂದ ಕೇಳಿ ತಿಳಿದಿದ್ದನ್ನು ತಾವೇ ಸಂಶೋಧಿಸಿದಂತೆ ಹೇಳುತ್ತಿದ್ದಾರೆ. ಇದರಿಂದ ಗೊಂದಲಕ್ಕೆ ಒಳಗಾಗುವವರು ಮಾತ್ರ ಸಾಮಾನ್ಯ ನಾಗರಿಕರು.

ಜಿಎಸ್‌ಟಿಯು ರಾಜಕಾರಣಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎನ್ನುವುದು ಗೊತ್ತಿರುವ ವಿಚಾರವೇ. ಜನರಲ್ಲಿ ಗೊಂದಲ ಮೂಡಿಸಿ ಮತ ಪಡೆಯುವ ಹುನ್ನಾರ ಅವರದು. ಕೆಲವು ವ್ಯಾಪಾರಿಗಳು ಕೂಡಾ ಸಾಮಾನ್ಯರನ್ನು ವಂಚಿಸಿ ತಮ್ಮ ಖಜಾನೆ ತುಂಬಿಸಿಕೊಳ್ಳಲು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಕೇಳಿದರೆ, ಅದಕ್ಕೆ ಜಿಎಸ್‌ಟಿಯ ಸಬೂಬು.

ರೆಸ್ಟೊರೆಂಟ್‌ಗಳಲ್ಲಿ ಜಿಎಸ್‌ಟಿ ದರವನ್ನು ಶೇ 5ಕ್ಕೆ ಇಳಿಸಿದ್ದರಿಂದ ಕೆಲವು ಮಾಲೀಕರು ಕಂಗೆಟ್ಟಿದ್ದಾರೆ. ಜಿಎಸ್‌ಟಿ ಹೆಸರಿನಲ್ಲಿ ಹಣ ದೋಚುತ್ತಿದ್ದ ಅವರು, ಈಗ ಆಹಾರ ಪದಾರ್ಥಗಳ ದರ ಹೆಚ್ಚಿಸಲು ಹುನ್ನಾರ ನಡೆಸುತ್ತಿರುವುದು ವರದಿಯಾಗಿದೆ. ಇದು ನಿಜವೇ ಆಗಿದ್ದರೆ ಜಿಎಸ್‌ಟಿ ದರ ಇಳಿಕೆಯ ನೈಜ ಲಾಭ ಗ್ರಾಹಕನಿಗೆ ಸಿಗುವುದಿಲ್ಲ. ಇದರಿಂದ ಜನಸಾಮಾನ್ಯರಿಗೆ ಏನು ದೊರೆತಂತಾಯಿತು?
-ಮಂಜುನಾಥ ಸು.ಮ., ಚಿಂತಾಮಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.