ADVERTISEMENT

ದಿಟ್ಟತನ ತೋರಲಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 19:30 IST
Last Updated 26 ಏಪ್ರಿಲ್ 2015, 19:30 IST

ಬೆಂಗಳೂರಿನ ಸಾರಕ್ಕಿ ಕೆರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಕಟ್ಟಡಗಳನ್ನು ಕೆಡಹುವ ಕಾರ್ಯ  ಸತತವಾಗಿ ಮುಂದುವರಿದಿದೆ. ಮಧ್ಯಮ ವರ್ಗದ ಕುಟುಂಬಗಳು ಬೀದಿಪಾಲಾದುದು ದಾರುಣಮಯ.

ಅಕ್ರಮವನ್ನು ಕ್ರಮಪ್ರಕಾರವಾಗಿ ವ್ಯವಸ್ಥೆಗೊಳಿಸಿ, ಅಮಾಯಕರನ್ನು ವಂಚಿಸಿ ಕೊನೆಗೆ ಇಂತಹ ಅಮಾಯಕರ ನನಸಾಗಿದ್ದ ಕನಸು ಈ ರೀತಿ ಭಗ್ನಗೊಳ್ಳುವುದಕ್ಕೆ ಪ್ರತ್ಯಕ್ಷ, ಪರೋಕ್ಷ ಕಾರಣರಾದ  ಭೂಗಳ್ಳರು, ಅಧಿಕಾರಿಗಳಿಗೆ  ಶಿಕ್ಷೆ ಇಲ್ಲವೇ? ಕೆರೆಯಂಗಳ ತೆರವಾಗುತ್ತದೆ.

ಮುಂದೆ ಸರ್ಕಾರ ಅಲ್ಲಿ ಕೆರೆಯನ್ನು  ಪುನಃ ರೂಪಿಸುವುದೇ? ಅಥವಾ ತೆರವಾದ ಜಾಗವನ್ನು, ಅಪಖ್ಯಾತಿಗೆ ಖ್ಯಾತಿವೆತ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂಥ ಸಂಸ್ಥೆಗೆ ಕೊಟ್ಟು ನಿವೇಶಗಳನ್ನು ರಚಿಸಿ ವಿತರಣೆ ಮಾಡುವ ಯೋಜನೆಯನ್ನು ಇಟ್ಟುಕೊಂಡಿದೆಯೇ?

ತೆರವಾದ ಜಾಗ ಮತ್ತೆ ಒತ್ತುವರಿದಾರರಿಗೆ ದಕ್ಕುವುದಿಲ್ಲವೆನ್ನುವುದಕ್ಕೆ ಏನಿದೆ ಖಾತರಿ? ಅಕ್ರಮ ಕಟ್ಟಡಗಳು ನಿರ್ಮಾಣವಾಗಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದವರನ್ನು ತಕ್ಷಣವೇ ಗುರುತಿಸಬೇಕು.

ಅಂಥವರಿಗೆ ಜೈಲೇ ಕಾಯಂ ನಿವಾಸ ಆಗುವಂತೆ ಮಾಡಬೇಕು. ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅದನ್ನು ಮಾರುವುದರಿಂದ ಬರುವ ಹಣವನ್ನು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ಹಂಚಬೇಕು.  ಇಂಥ ದಿಟ್ಟತನವನ್ನು ಸರ್ಕಾರ ತೋರುವುದೇ?
ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT