ADVERTISEMENT

ಧರ್ಮಾಂಧತೆಗೆ ಅವಕಾಶ ಬೇಡ

ಅನ್ನಪೂರ್ಣ ವೆಂಕಟನಂಜಪ್ಪ
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST

ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ನೂಕನಬಂಡೆ ಗ್ರಾಮದಲ್ಲಿ ಧರ್ಮ­ಗ್ರಂಥ ಕುರಾನ್‌ಗೆ ಕುಡಿದ ನಶೆಯಲ್ಲಿ ಅವಮಾನ ಮಾಡಿದನೆಂಬ ಕಾರಣಕ್ಕೆ ಯುವಕನೊಬ್ಬನ  ಕೊಲೆ ನಡೆದಿದೆ.

ಇಸ್ಲಾಂ ಧರ್ಮ ಜಗತ್ತಿನ ಅತ್ಯಂತ ಮಾನ­ವೀಯ ಧರ್ಮವಾಗಿದ್ದು ಹಿಂಸೆಯನ್ನು ಯಾವತ್ತೂ ಒಪ್ಪುವುದಿಲ್ಲ. ಆ ಯುವಕನದು ‘ತಪ್ಪು’ ಆದರೆ ಅವನನ್ನು ಕೊಂದವರು ‘ಅಪ­ರಾಧಿ’ಗಳಾಗಿದ್ದಾರೆ. ಅವನ ತಪ್ಪನ್ನು ತಿದ್ದುವ ಎಲ್ಲಾ ಅವಕಾಶಗಳೂ ಇದ್ದವು.

‘ಸರ್ವ ಜನಾಂಗದ ಶಾಂತಿಯ ತೋಟ’ವಾದ ನಮ್ಮ ದೇಶದಲ್ಲಿ ಧರ್ಮಾಂಧತೆಗೆ ಅವಕಾಶ ಮಾಡಿಕೊಡುವುದು ಬೇಡ. ಇಂತಹ ಘಟನೆಗಳು ನಮ್ಮ ರಾಷ್ಟ್ರೀಯತೆಗೆ ಮಾಡಿದ ಅವಮಾನ. ಇವುಗಳು ಮತ್ತೆ ಮರುಕಳಿಸದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.