ADVERTISEMENT

ನಕಲಿ ನೋಟು ಹಾವಳಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 19:56 IST
Last Updated 27 ಡಿಸೆಂಬರ್ 2017, 19:56 IST

ಕೇಂದ್ರ ಸರ್ಕಾರ ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಸಂದರ್ಭದಲ್ಲಿ ನಕಲಿ ನೋಟುಗಳ ಹಾವಳಿಗೆ ಸ್ವಲ್ಪ ಮಟ್ಟಿನ ಬ್ರೇಕ್ ಬಿದ್ದಿತ್ತು. ಆದರೆ ಈಗ ₹ 2000 ಮುಖಬೆಲೆಯ ನಕಲಿ ನೋಟುಗಳು ಅಲ್ಲಿ-ಇಲ್ಲಿ ಕಾಣಲು ಆರಂಭವಾಗಿವೆ. ಇತ್ತೀಚಿಗೆ ಶಿಢ್ಲಘಟ್ಟ ಪಟ್ಟಣದಲ್ಲೇ ನಕಲಿ ನೋಟುಗಳ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದವು. ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರೊಬ್ಬರಿಂದ ಗೂಡು ಖರೀದಿಸಿ ನಕಲಿ ನೋಟುಗಳನ್ನು ನೀಡಿದ ವ್ಯಕ್ತಿಯೊಬ್ಬರು

ಸಿಕ್ಕಿಬಿದ್ದಿದ್ದಾರೆ. ಮುಗ್ಧ ಜನರನ್ನೇ ಗುರಿ ಮಾಡಿಕೊಳ್ಳುವ ನಕಲಿ ನೋಟುಗಳ ದಂಧೆಕೋರರ ಬಗ್ಗೆ ರೈತರು ಮತ್ತು ವರ್ತಕರು ಎಚ್ಚರದಿಂದಿರಬೇಕು.

–ಮನೋಹರ ವಿ., ಶಿಢ್ಲಘಟ್ಟ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.