ADVERTISEMENT

‘ನದಿಗಳನ್ನು ಉಳಿಸಿ’ ಅಭಿಯಾನ: ಚರ್ಚೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST
‘ನದಿಗಳನ್ನು ಉಳಿಸಿ’ ಅಭಿಯಾನ: ಚರ್ಚೆ ಅಗತ್ಯ
‘ನದಿಗಳನ್ನು ಉಳಿಸಿ’ ಅಭಿಯಾನ: ಚರ್ಚೆ ಅಗತ್ಯ   

ದೇಶದ ನೀರಿನ ಬವಣೆ, ಬರ ನೀಗಿಸುವ ಸಲುವಾಗಿ ರೂಪಿಸಿರುವ ನದಿ ಜೋಡಣೆ ಯೋಜನೆಗೆ ಈಗ ಮಹತ್ವ ಬಂದಿದೆ. ಈಶ ಪೌಂಡೇಷನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್‌ ಅವರು ಹೇಳುವಂತೆ, ಇನ್ನು 20–25 ವರ್ಷಗಳ ಬಳಿಕ ನೀರಿನ ಕೊರತೆ ತೀವ್ರಗೊಂಡು ಮಾನವನ ಜೀವನ ಅಸಹನೀಯವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸದ್ಗುರು ಅವರು ‘ನದಿಗಳನ್ನು ಉಳಿಸಿ’ ಅಭಿಯಾನ ಆರಂಭಿಸಿದ್ದಾರೆ. ಇದು ಸ್ವಾಗತಾರ್ಹ.

ಧರ್ಮಸ್ಥಳದ ಡಾ. ವಿರೇಂದ್ರ ಹೆಗ್ಗಡೆಯವರು ಹಾವೇರಿಯಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತ ನದಿ ಜೋಡಣೆಗೂ ಮೊದಲು ಅದರ ಬಗ್ಗೆ ವಿವರವಾಗಿ ಅಧ್ಯಯನ ಮಾಡಿ ತಿರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದಿದ್ದಾರೆ. ನದಿಗಳು ನಿಸರ್ಗದ ಕೊಡುಗೆ, ಮಾನವ ತನ್ನ ಅವಶ್ಯಕತೆಗೆ ಅನುಸಾರವಾಗಿ ಅವುಗಳನ್ನು ಜೋಡಿಸಿದರೆ ಆಗಬಹುದಾದ ಪ್ರಕೃತಿ ವಿಕೋಪಗಳ ಬಗ್ಗೆ ಮೊದಲು ಚಿಂತಿಸುವುದು ಅಗತ್ಯ.

ಸರ್ಕಾರ ಈ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೂ ಮೊದಲು ತಜ್ಞರ ಅಭಿಪ್ರಾಯಗಳನ್ನು ಪಡೆದು ಮುಂದುವರಿಯುವುದು ಸೂಕ್ತ. ಇಲ್ಲದಿದ್ದರೆ ಪ್ರಕೃತಿ ವಿರುದ್ಧ ಕೆಲಸ ಮಾಡಿದ್ದಕ್ಕೆ ಬೆಲೆ ತೆರಬೇಕಾದೀತು.
–ಗಂಗಾಧರ ಅಂಕೊಲೇಕರ, ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.