ADVERTISEMENT

ನಿಯಮ ಉಲ್ಲಂಘನೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಹೊಣೆಯಾಗುವ ಹಲವು ಕಾರಣಗಳನ್ನು ಮುಂದಿಟ್ಟಿರುವ ಲೇಖನ (ಸಂಗತ, ಜುಲೈ 23) ಸಕಾಲಿಕ ಎಚ್ಚರಿಕೆಯಂತಿದೆ. ವಾಹನಗಳ  ಓಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ನಡೆದಿದ್ದರೆ, ಅವುಗಳನ್ನು ಬಳಸುವ ರಸ್ತೆಗಳು ಮಾತ್ರ ಇದ್ದಷ್ಟೇ ಇವೆ (ಕೆಲಕಡೆ ಅತಿಕ್ರಮಣದಿಂದಾಗಿ ಅವು ಕೂಡ ಕುಬ್ಜಗೊಂಡಿವೆ, ಕುರೂಪಗೊಂಡಿವೆ).

ಅಂಗೈನಲ್ಲಿ ಜೀವ ಹಿಡಿದು ರಸ್ತೆ ದಾಟಬೇಕಾಗುತ್ತದೆ.  ನಾನಿರುವ ಸಣ್ಣ ಊರಿನಲ್ಲೇ ಇಂತಹ ಪರಿಸ್ಥಿತಿ ಇರುವಾಗ ಇನ್ನು ದೊಡ್ಡ ನಗರಗಳ ಬಗ್ಗೆ ಹೇಳುವುದೇನಿದೆ? ಸಂಚಾರ ನಿಯಮಗಳನ್ನು ಪಾಲಿಸದಿರುವುದು ಇಂದು ಹೆಗ್ಗಳಿಕೆಯಂತಾಗಿದೆ. ರಾತ್ರಿ ಹೆಡ್‌ಲೈಟ್‌ ಹಾಕದೆ ಬೈಕ್‌ಗಳಲ್ಲಿ ಓಡಾಡುವುದು, ಜೋರಾಗಿ ವ್ಹೀಲಿಂಗ್‌ ಮಾಡುವುದು, ಹಲವರು ಒಂದೇ ಬೈಕಿನಲ್ಲಿ ಹೋಗುವುದು ಸುಶಿಕ್ಷಿತ ಯುವಕರಿಗೆ ಫ್ಯಾಷನ್ ಆಗಿದೆ. ಚಾಲನಾ ಪರವಾನಗಿ ಇಲ್ಲದೆ ಬೈಕ್‌ ಓಡಿಸುವ ಶಾಲಾ ಹುಡುಗರನ್ನು ಪೊಲೀಸರಷ್ಟೇ  ಅಲ್ಲ, ಪಾಲಕರೂ ಹದ್ದುಬಸ್ತಿನಲ್ಲಿ ಇಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT