ADVERTISEMENT

ನಿರಾಶ್ರಿತರಿಗೆ ದಸರಾ ‘ಕೊಡುಗೆ’

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಅಕ್ಟೋಬರ್ 2014, 19:30 IST
Last Updated 1 ಅಕ್ಟೋಬರ್ 2014, 19:30 IST

ಮೈಸೂರಿನಲ್ಲಿ ದಸರಾ ಆರಂಭವಾಯಿ­ತೆಂದರೆ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಮಲಗುವ ಜನರಿಗೆ ಪರ್ಯಾಯ ‘ಆಶ್ರಯ’ ವ್ಯವಸ್ಥೆ  ಕಲ್ಪಿಸಲಾಗುತ್ತದೆ. ವಿದೇಶಿಗರಿಗೆ ತೊಂದ­ರೆ­ಯಾಗಬಾರದು. ಅವರಿಗೆ ಕಿರಿಕಿರಿ ಉಂಟಾಗ­ಬಾರದು ಎಂಬುದೇ ಇದರ ಹಿಂದಿನ ಉದ್ದೇಶ.

ದಸರಾ ಮುಗಿದ ಮೇಲೆ ಇವರ ಪಾಡು ಮತ್ತದೇ ಹಳೆಯ ಸ್ಥಿತಿ. ನಿರಾಶ್ರಿತರ ಬಗ್ಗೆ ಇಂತಹ ಕ್ಷಣಿಕ ಕರುಣೆ ಏಕೆ? ಇಂತಹ ಜನರಿಗೆ ಸರ್ಕಾರ ಶಾಶ್ವತವಾಗಿ ವಸತಿ ಕಲ್ಪಿಸಲು ತಕ್ಷಣಕ್ಕೆ ಆಗದಿದ್ದರೂ ಅವರಿಗೆ ಬದುಕುವ ದಾರಿ ತೋರಿಸಲು ಪ್ರಯತ್ನಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.