ADVERTISEMENT

ಪರಭಾಷಾ ಮೋಹ!

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 19:30 IST
Last Updated 26 ಜುಲೈ 2016, 19:30 IST

ಕನ್ನಡ ಟಿ.ವಿ. ವಾಹಿನಿಗಳು ತಮಿಳು, ತೆಲುಗು, ಹಿಂದಿ ಮತ್ತಿತರ ಭಾಷೆಗಳ ಸಿನಿಮಾಗಳ ಬಗ್ಗೆ ಗಂಟೆಗಟ್ಟಲೆ ಚರ್ಚೆ ಮಾಡುತ್ತವೆ.

ರಜನೀಕಾಂತ್, ಸಲ್ಮಾನ್‌ ಖಾನ್, ಮಹೇಶ್‌ ಬಾಬು, ರಾಜಮೌಳಿ ಅವರ ಚಿತ್ರಗಳ ಬಗ್ಗೆ ವಾರಪೂರ್ತಿ ಕಾರ್ಯಕ್ರಮ ಆಯೋಜಿಸುತ್ತವೆ.

ಸಿನಿಮಾಗಳಿಗೆ ಸಂಬಂಧಿಸಿದ ನಿಗದಿತ  ಕಾರ್ಯಕ್ರಮಗಳಲ್ಲೂ  ಪರಭಾಷೆಯ ಸಿನಿಮಾಗಳ ಬಗ್ಗೆಯೇ ಸುದ್ದಿಗಳು ತುಂಬಿರುತ್ತವೆ.

ಒಂದು ವಾಹಿನಿಯಂತೂ ತೆಲುಗು ನಟ-ನಟಿಯರ ಮದುವೆಗಳನ್ನು 2-3 ದಿನ ನೇರ ಪ್ರಸಾರ ಮಾಡಿದೆ. ಯಾವುದಾದರೂ ಬೇರೆ ಭಾಷೆಯ ವಾಹಿನಿ ಇಲ್ಲಿಯವರೆಗೆ ಕನ್ನಡ ಸಿನಿಮಾಗಳ ಬಗ್ಗೆ ಹೀಗೆ ಓತಪ್ರೋತವಾಗಿ ಸುದ್ದಿಗಳನ್ನು ಪ್ರಸಾರ ಮಾಡಿರುವ ಉದಾಹರಣೆ ಇದೆಯೇ?
-ಶಂಕರ ಗೌಡಿ, ದುರದುಂಡಿ, ಗೋಕಾಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.