ADVERTISEMENT

ಪರಿಣಾಮಕಾರಿ ಅನುಷ್ಠಾನ ಸಾಧ್ಯವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ನವೆಂಬರ್ 2014, 19:30 IST
Last Updated 27 ನವೆಂಬರ್ 2014, 19:30 IST

ಸಿಗರೇಟುಗಳನ್ನು ಬಿಡಿಯಾಗಿ ಮಾರಾಟ ಮಾಡುವುದಕ್ಕೆ ಹಾಗೂ ತಂಬಾಕು ಉತ್ಪನ್ನಗಳ ಖರೀದಿಗೆ ಕನಿಷ್ಠ ವಯೋಮಿತಿ ಏರಿಸುವ ಕುರಿತು ಕೇಂದ್ರ ಸರ್ಕಾರ ಚಿಂತಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಸಾಧ್ಯವೇ ಎನ್ನುವುದೇ ಪ್ರಶ್ನೆ. 

ನಾಯಿಕೊಡೆಗಳಂತೆ ಎಲ್ಲೆಡೆ ಇರುವ ಪಾನ್‌ಬೀಡಾ ಅಂಗಡಿಗಳಿಗೆ ಕಣ್ಗಾವಲು ಇಡುವವರು ಯಾರು? ಗೂಡು ಅಂಗಡಿಗಳಿಗೆ ಕಾವಲು ಕಾಯು­ವವರಾರು? ರಾಜ್ಯದಲ್ಲಿ ಗುಟ್ಕಾ ನಿಷೇಧವಿದ್ದರೂ ಕಂಪೆನಿಗಳು ತಂಬಾಕು ಮತ್ತು ಅಡಿಕೆಯನ್ನು ಪ್ರತ್ಯೇಕ ಪೊಟ್ಟಣಗಳಲ್ಲಿ ಪೂರೈಸುತ್ತಿಲ್ಲವೆ? ಸರ್ಕಾರವು ಜನರ ಆರೋಗ್ಯದ ಕುರಿತು ನೈಜ ಕಾಳಜಿ ಹೊಂದಿ­ದ್ದರೆ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.