ADVERTISEMENT

ಪ್ರಚಾರಕ್ಕೋ, ಬಡತನಕ್ಕೋ?

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST

ಅಧಿಕಾರದ ಗದ್ದುಗೆ ಏರಲು ರಾಜಕಾರಣಿಗಳು ಹಲವಾರು ಸಾಹಸಗಳನ್ನು ಮಾಡಿ ಜನರ ಮನವೊಲಿಕೆಗೆ ಯತ್ನಿಸುತ್ತಾರೆ. ಆದರೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರಾಖಂಡದ ಹೃಷಿಕೇಶದಲ್ಲಿ ನಡೆದ ಪಕ್ಷದ ರ್‍ಯಾಲಿಯಲ್ಲಿ ಪ್ರಧಾನಿ ತೊಡುವ ಉಡುಪುಗಳ ಬಗ್ಗೆ ಟೀಕೆ ಮಾಡಿದ್ದಾರೆ. ಜೊತೆಗೆ ಆ ಸಂದರ್ಭದಲ್ಲಿ ತಾವು ಧರಿಸಿದ್ದ ಹರಿದ ಕುರ್ತಾವನ್ನು ಜನರೆಡೆಗೆ ತೋರಿಸಿ ಅನುಕಂಪ ಗಿಟ್ಟಿಸಲು ಯತ್ನಿಸಿದ್ದಾರೆ (ಪ್ರ.ವಾ., ಜ. 17).

ಇದು ಒಂದು ರೀತಿ ಹೊಸ ಬಗೆ ಪ್ರಚಾರ ತಂತ್ರ. ಹಾಗಿಲ್ಲವೆಂದಾದರೆ, ರಾಹುಲ್ ಅವರಿಗೆ ತೊಡುವುದಕ್ಕೆ ಸರಿಯಾದ ಬಟ್ಟೆ ಇಲ್ಲವೇ? ಪ್ರಚಾರಕ್ಕಾಗಿ ಬಟ್ಟೆ ಹರಿದುಕೊಂಡು ಬಂದರೇ? ಅಥವಾ ನೋಟು ನಿಷೇಧದಿಂದಾಗಿ ಬಟ್ಟೆ ಖರೀದಿಸಲು ಅನನುಕೂಲ ಉಂಟಾಯಿತೇ ಎನ್ನುವ ಪ್ರಶ್ನೆಗಳು ಮೂಡುತ್ತವೆ.
-ರಾಮನಗೌಡ ಸಿ. ಬಿರಾದಾರ
ಶಿರಕನಹಳ್ಳಿ, ಇಂಡಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.