ADVERTISEMENT

ಪ್ರಶ್ನಿಸುವ ಹಕ್ಕಿಲ್ಲವೇ?

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:25 IST
Last Updated 20 ಏಪ್ರಿಲ್ 2017, 19:25 IST

ಸೇನೆಯಲ್ಲಿ ನೀಡುವ ಆಹಾರದ ಗುಣಮಟ್ಟದ ಬಗ್ಗೆ  ಪ್ರಶ್ನೆ ಮಾಡಿದ ಯೋಧ ತೇಜಬಹದ್ದೂರ್ ಅವರನ್ನು ಸೇನೆ ಸೇವೆಯಿಂದ ವಜಾ ಮಾಡಿದೆ.
ಆಹಾರದ ಗುಣಮಟ್ಟದ ಬಗ್ಗೆ ತೇಜಬಹದ್ದೂರ್‌ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೊ ಪ್ರಸಾರ ಮಾಡಿದ್ದರಿಂದ ಸೇನೆಗೆ ಮುಜುಗರ ಉಂಟಾದಂತೆ ಕಾಣಿಸುತ್ತದೆ.

ಸೇನೆಯ ಈ ನಡೆಯಿಂದ  ಯೋಧರು ಪ್ರಶ್ನಿಸುವ ಹಕ್ಕನ್ನೆ  ಹೊಂದಿಲ್ಲ ಹಾಗೂ ಮುಂದೆ ಈ ರೀತಿ ಯಾರೂ ಟೀಕೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದಂತಾಗಿದೆ.

ಪತ್ರ, ಟ್ವೀಟ್‌ ಮುಂತಾದ ಮಾಧ್ಯಮಗಳ ಮೂಲಕ ಸಲ್ಲಿಸಿದ ಸಣ್ಣಪುಟ್ಟ ಕೋರಿಕೆಗಳಿಗೂ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪ್ರಕರಣ ಕಾಣಲಿಲ್ಲವೇ?

ADVERTISEMENT

ದೇಶದ ಆದಾಯದ ಬಹುಪಾಲನ್ನು ರಕ್ಷಣೆಗೆ ವ್ಯಯಿಸುವ ಸರ್ಕಾರ, ಸೈನಿಕರಿಗೆ ಗುಣಮಟ್ಟದ ಆಹಾರ ನೀಡಲು ವ್ಯವಸ್ಥೆ ಮಾಡಬಾರದೇ ?
ಸೈನಿಕರಿಗೆ ಇನ್ನೂ ‘ಅಚ್ಛೇ ದಿನ್’ ಬಂದಿಲ್ಲ ಎಂದರೆ ದುರಂತವೇ ಸರಿ...!
-ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.