ADVERTISEMENT

ಭದ್ರತೆಯ ಕೊರತೆ

ರಮೇಶ ಕೋಟ್ಯಾಳ, ವಿಜಯಪುರ
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

ರಾಷ್ಟ್ರಕವಿ ಕುವೆಂಪು ಅವರ ಮನೆಯಲ್ಲಿ ಕಳ್ಳತನ ನಡೆದಿರುವುದು ಕನ್ನಡಿಗರೆಲ್ಲರೂ ತಲೆ ತಗ್ಗಿಸುವಂತಹದ್ದು. ಇಲ್ಲಿ ಭದ್ರತಾ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತದೆ. ಸರ್ಕಾರ ಕುವೆಂಪು ಅವರ ಮನೆಯನ್ನು ತನ್ನ ವಶಕ್ಕೆ ಪಡೆದ ಮೇಲೆ ಅದರ ಎಲ್ಲ ಜವಾಬ್ದಾರಿಯೂ ಅದರದ್ದೇ ಆಗಿರುತ್ತದೆ.

ಹಗಲು ರಾತ್ರಿ ಪೊಲೀಸ್ ಕಾವಲು ಏರ್ಪಡಿಸದೆ ಸಾದಾ ಕಾವಲುಗಾರರನ್ನು ನೇಮಿಸಿರುವುದು ಈ ಕೃತ್ಯಕ್ಕೆ ಕಾರಣ. ಇನ್ನಾದರೂ ಸರ್ಕಾರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ, ಕುವೆಂಪು ಅವರು ಬಳಸಿದ ಅಪರೂಪದ ವಸ್ತುಗಳು, ಅಮೂಲ್ಯವಾದ ಪುಸ್ತಕ ಭಂಡಾರ ಹಾಗೂ ಪ್ರಶಸ್ತಿಗಳನ್ನು ಸಂರಕ್ಷಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.