ADVERTISEMENT

ಭೂತಗನ್ನಡಿ ಬೇಡ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಫೆಬ್ರುವರಿ 2016, 19:31 IST
Last Updated 7 ಫೆಬ್ರುವರಿ 2016, 19:31 IST

ಬೆಂಗಳೂರಿನಲ್ಲಿ ತಾಂಜಾನಿಯಾ ವಿದ್ಯಾರ್ಥಿನಿ  ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಇಲ್ಲಸಲ್ಲದ ಬಣ್ಣ ಹಚ್ಚುತ್ತಿರುವುದು ಸರಿಯಲ್ಲ.

ಪ್ರಕರಣಕ್ಕೆ ಮುಖ್ಯವಾಗಿ ಎರಡು ಆಯಾಮಗಳಿವೆ. ಅದನ್ನು ನೈಜವಾಗಿ ಬಿಂಬಿಸುವ ಬದಲು ಬೆಂಗಳೂರಿನ ಪ್ರತಿಷ್ಠೆಗೆ ಮಸಿ ಬಳಿಯುವ ರೀತಿಯಲ್ಲಿ ರಾಷ್ಟ್ರ ಮಟ್ಟದ ಅದರಲ್ಲೂ ಇಂಗ್ಲಿಷ್‌ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿವೆ. ಇದು ಸರಿಯಲ್ಲ.

ಬೆಂಗಳೂರಿನ ಜನ ಶಾಂತಿಪ್ರಿಯರು. ಅಪಘಾತ ನಡೆದಂಥ ಸಂದರ್ಭದಲ್ಲಿ ಕೆಲವರು ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಅದಕ್ಕೆ ಭಾಷೆ, ಬಣ್ಣ, ಜಾತಿ, ದೇಶ, ಧರ್ಮಗಳ ಭೇದ ಇರಲಾರದು. ಬಿಡಿ ಘಟನೆಗಳನ್ನು ಬಿಡಿ ಘಟನೆಗಳಾಗಿಯೇ ನೋಡಬೇಕು. ಅದರ ಹಿಂದೆ ಬಹುಪಾಲು ಸಂದರ್ಭಗಳಲ್ಲಿ ವ್ಯಕ್ತಿ ನೆಲೆಯ ರಾಗ–ದ್ವೇಷಗಳಷ್ಟೆ ಕೆಲಸ ಮಾಡಿರುತ್ತವೆ. ಅದಕ್ಕೆ ಭೂತಗನ್ನಡಿ ಹಿಡಿಯುವುದು ಬೇಡ.

ವಿದೇಶಿ ಮೂಲದವರು ಎಂಬ ಕಾರಣಕ್ಕೆ ಯಾರನ್ನೂ ಕೀಳಾಗಿ ಕಾಣಬಾರದು. ಅಂತೆಯೇ ಅವರಿಗೆ ವಿಶೇಷ ವಿನಾಯಿತಿಗಳನ್ನೂ ನೀಡುವ ಅಗತ್ಯ ಇಲ್ಲ. ಇದೇ ಮಾತು ಸ್ಥಳೀಯರಿಗೂ ಅನ್ವಯಿಸುತ್ತದೆ. ಕಾನೂನಿನ ಅನುಸಾರ ಕ್ರಮ ಜರುಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.