ಕೇಂದ್ರ ಸರ್ಕಾರ ತನ್ನ ಮಹಿಳಾ ನೌಕರರಿಗೆ ಪ್ರಸೂತಿ ರಜೆಯೊಂದಿಗೆ ಎರಡು ವರ್ಷಗಳ ಕಾಲ ಮಗುವಿನ ಆರೈಕೆಗಾಗಿ ರಜೆಯನ್ನು ನೀಡುತ್ತಿರುವುದು ತಿಳಿದಿರುವ ವಿಷಯ.
ಕರ್ನಾಟಕ ರಾಜ್ಯ ಸರ್ಕಾರವೂ ಎರಡು ವರ್ಷಗಳ ಕಾಲ ಅರ್ಹ ಮಹಿಳಾ ನೌಕರರಿಗೆ ಮಗುವಿನ ಆರೈಕೆಯ ರಜೆ ನೀಡಲು ಮುಂದಾಗಲಿ. ಈಗಿನ ಕಾಲದಲ್ಲಿ ಗಂಡ–ಹೆಂಡತಿ ಇಬ್ಬರೂ ದುಡಿಯುವುದು ಅನಿವಾರ್ಯ. ಇಂತಹ ಸಮಯದಲ್ಲಿ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದೆ, ಆರೈಕೆ ಕಷ್ಟವಾಗಿದೆ. ಇದರಿಂದ ಮಗುವಿನ ಸ್ಥಿತಿ ಅತಂತ್ರ ವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಮನಸ್ಸು ಮಾಡಿ ಒಂದು ವರ್ಷ ಕಾಲ ಪೂರ್ಣವೇತನ ಹಾಗೂ ನಂತರದ ಒಂದು ವರ್ಷ ಅರ್ಧವೇತನ ನೀಡಿ, ಮಹಿಳಾ ನೌಕರರ ವೃತ್ತಿ ಜೀವನಕ್ಕೆ ತೊಂದರೆಯಾಗದಂತೆ ಈ ಸೌಲಭ್ಯ ಒದಗಿಸಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.