ADVERTISEMENT

ಮತ್ತೊಂದು ಮಗ್ಗುಲು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST

‘ನವೋದಯ ಸಾಹಿತ್ಯ ಕವಿಗಳಿಗೆ ಹೋಲಿಸಿಕೊಂಡರೆ, ಈ 25 ವರ್ಷಗಳಲ್ಲಿ ಬಂದಿರುವ ಅನೇಕಾನೇಕ ಕಾವ್ಯಗಳನ್ನು ಓದಿದರೆ ಒಂದು ಸಾಲೂ ನೆನಪಿಗೆ ಬರುವುದಿಲ್ಲವಲ್ಲ! ಯಾಕೆ?’ ಎಂದಿರುವ ಓ.ಎಲ್.ನಾಗಭೂಷಣ ಸ್ವಾಮಿಯವರ ಮಾತುಗಳಿಗೆ ಹೊರೆಯಾಲ ದೊರೆಸ್ವಾಮಿಯವರು ಮೆಚ್ಚುಗೆಯನ್ನು ಸೂಚಿಸುತ್ತಾ ‘ಕೊನೆಗೂ ಕನ್ನಡದ ಒಬ್ಬ ವಿಮರ್ಶಕರಾದರೂ ಧೈರ್ಯ ಮಾಡಿ ನಿಜ ಹೇಳಿದರಲ್ಲ!’ ಎಂದು ಅಭಿನಂದಿಸಿದ್ದಾರೆ (ವಾ.ವಾ., ಆ. 24).

ಮತ್ತೊಂದು ಮಗ್ಗುಲಿನಿಂದ ವಿಮರ್ಶಕರ ಮಾತನ್ನು ನೋಡಿದಾಗ, ಕಳೆದ 25 ವರ್ಷಗಳ ಅವಧಿಯಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಜಾತಿಶ್ರೇಣಿಯ ಕಾರಣದಿಂದಾಗಿ ತುಳಿತಕ್ಕೆ ಒಳಗಾಗಿ ನರಳುತ್ತಿರುವ ಕೆಳಜಾತಿಯವರ ಮತ್ತು ಲಿಂಗಭೇದದ ಕಾರಣದಿಂದ ನೂರೆಂಟು ಬಗೆಯ ಶೋಷಣೆಗೆ ಗುರಿಯಾಗಿ ನರಳಿ ಸಾಯುತ್ತಿರುವ ಜನಸಮುದಾಯದ ಒಳಮಿಡಿತಗಳನ್ನು ಅಭಿವ್ಯಕ್ತಿಸಿರುವ ಕಾವ್ಯಗಳ ಯಾವೊಂದು ಸಾಲುಗಳಿಗೂ ಈ ವಿಮರ್ಶಕರ ಮನ ತುಸುವಾದರೂ ಮಿಡಿದಿಲ್ಲವೆಂಬ ಆರೋಪವನ್ನು ಮಾಡಬಹುದಾಗಿದೆ. ಸಾರಸಗಟಾಗಿ ಎಲ್ಲವನ್ನೂ ಒಪ್ಪಿಕೊಳ್ಳುವ ಇಲ್ಲವೇ ತಳ್ಳಿಹಾಕುವ ನೆಲೆಯಿಂದ ಕಾವ್ಯದ ಓದುಗರು ಮತ್ತು ವಿಮರ್ಶಕರು ಪಾರಾಗಬೇಕಾದ ಅಗತ್ಯವಿದೆ.
-ಸಿ.ಪಿ. ನಾಗರಾಜ,  ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.