ADVERTISEMENT

ಮನಸ್ಸು ಕೆಡಿಸಬೇಡಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 19:30 IST
Last Updated 10 ಸೆಪ್ಟೆಂಬರ್ 2017, 19:30 IST

‘ವೀರಶೈವ ಹೆಸರಿನಲ್ಲಿ ರಾಜಕಾರಣ ಮಾಡಲಿ’ ಎಂದು ಸಚಿವ ಎಂ.ಬಿ. ಪಾಟೀಲ ಈಚೆಗೆ ವೀರಶೈವ ಸ್ವಾಮಿಗಳಿಗೆ ಸವಾಲು ಹಾಕಿದ್ದಾರೆ (ಪ್ರ.ವಾ., ಸೆ.5).
ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಜನರು ಕಂಗೆಟ್ಟಿದ್ದಾರೆ. ಇಂತಹ ಸಮಯದಲ್ಲಿ ಸಚಿವರು ‘ವೀರಶೈವ–ಲಿಂಗಾಯತ’ ರಾಜಕಾರಣ ಮಾಡುತ್ತಿದ್ದಾರೆ. ವೇದ, ಆಗಮ,ಉಪನಿಷತ್ತು ಮತ್ತು ಹಿಂದೂ ಸಂಸ್ಕೃತಿಯನ್ನು ಅರಿಯದ ಕೆಲವು ಸ್ವಾಮಿಗಳು ಹಾಗೂ ಸ್ವಾರ್ಥಕ್ಕಾಗಿ ಬಸವಣ್ಣನ ವಚನಗಳ ಅಂಕಿತವನ್ನೇ ತಿದ್ದಿದಂತಹ ಮಾತೆ ಮಹಾದೇವಿಯವರ ಬೆಂಬಲಕ್ಕೆ ನಿಂತು ಅವರು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಎಂ.ಬಿ. ಪಾಟೀಲರು ರಾಜ್ಯದ ಎಲ್ಲಾ ಜಾತಿ–ಮತಗಳ ಜನರಿಗೆ ಮಂತ್ರಿಯಾಗಿರುತ್ತಾರೆ ಎಂದು ನಾನು ತಿಳಿದಿದ್ದೆ. ಆದರೆ ಅವರು ಲಿಂಗಾಯತರಿಗೆ ಮಾತ್ರ ಮಂತ್ರಿಯಾಗಿ ರಾಜಕಾರಣ ಮಾಡುತ್ತಿದ್ದು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ಪಡೆಯಲು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದಿದ್ದಾರೆ. ಅದನ್ನು ಯಾರೂ ಬೇಡ ಎನ್ನುವುದಿಲ್ಲ. ಆದರೆ ಅವರು ಮೊದಲು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಆನಂತರ ಧರ್ಮ ರಾಜಕಾರಣ ಮಾಡಲಿ.

ಜನರ ಮನಸ್ಸನ್ನು ಕಲುಷಿತಗೊಳಿಸಿ ಅರಾಜಕತೆ ಹುಟ್ಟುಹಾಕುವುದನ್ನು ಸಚಿವರು ನಿಲ್ಲಿಸಬೇಕು.
-ಪಿ.ನಂಜುಂಡಶಾಸ್ತ್ರಿ, ಚೌಳಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT