ADVERTISEMENT

ಮೂಲ ಸೌಕರ್ಯ ಕಲ್ಪಿಸಿ

ಎಸ್.ಎಸ್.ಪಾಟೀಲ, ವಿಜಯಪುರ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST

‘ಇನ್ವೆಸ್ಟ್‌ ಕರ್ನಾಟಕ’ವು ರಾಜ್ಯಕ್ಕೆ ₹ 1.33 ಲಕ್ಷ ಕೋಟಿ ಬಂಡವಾಳ ಆಕರ್ಷಿಸಿದೆ (ಪ್ರ.ವಾ., ಫೆ. 5) ಎಂದು ವರದಿಯಾಗಿದೆ. ಹೂಡಿಕೆಯ ಈ ಒಪ್ಪಂದಗಳು ಕಾರ್ಯಗತಗೊಳ್ಳುವುದು ಮೂಲ ಸೌಕರ್ಯಗಳನ್ನು ಅವಲಂಬಿಸಿದೆ. ಉದಾಹರಣೆಗೆ ಬಳ್ಳಾರಿ, ಕೊಪ್ಪಳ ಭಾಗದಲ್ಲಿ ಉಕ್ಕು, ವಿದ್ಯುತ್ ಮತ್ತು ಸಿಮೆಂಟ್ ಕಾರ್ಖಾನೆಗಳಿದ್ದು ಇಲ್ಲಿ ಲಕ್ಷಾಂತರ ಕಾರ್ಮಿಕರಿದ್ದಾರೆ.

ಇವರಿಗೆಲ್ಲ ಸಂಪರ್ಕಕ್ಕಾಗಿ ಪುಣೆ, ಸೊಲ್ಲಾಪುರ, ದೆಹಲಿ ಕಡೆ ಹೋಗಲು ಒಂದೂ ನೇರವಾದ ರೈಲು ಇಲ್ಲ. ಅಲ್ಲದೆ ರಾಜಧಾನಿ ಬೆಂಗಳೂರಿಗೆ ಬರಲು ಹೋಗಲು ಹಂಪಿ ಎಕ್ಸ್‌ಪ್ರೆಸ್ ಒಂದೇ ರೈಲು ಇದೆ. ಇನ್ನೊಂದು ರೈಲನ್ನು ನಿತ್ಯ ವಿಜಯಪುರದಿಂದ ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ಗುಂತಕಲ್ ಮಾರ್ಗದಲ್ಲಿ ಬೆಂಗಳೂರಿಗೆ ಓಡಿಸಿದರೆ ಉತ್ತಮ. ಅದಕ್ಕಾಗಿ ರೈಲ್ವೆ ಇಲಾಖೆಗೆ ಅನೇಕ ಸಲ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಹೀಗಾದರೆ  ಅಭಿವೃದ್ಧಿ ವೇಗ ಪಡೆಯುವುದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.