ADVERTISEMENT

ಮೊಬೈಲ್‌ ಮಾಯೆ

ಎಚ್‌.ಆರ್‌.ದೇಸಾಯಿ
Published 5 ಜುಲೈ 2015, 19:30 IST
Last Updated 5 ಜುಲೈ 2015, 19:30 IST

ಈಗ ಎಲ್ಲೆಲ್ಲೂ ಮೊಬೈಲ್‌ ಮಾಯೆ. ಯುವಕ–ಯುವತಿ ಯರು ರಸ್ತೆ ಮೇಲೆ ನಡೆಯುತ್ತಿರುವಾಗ ಮೊಬೈಲ್‌ನಲ್ಲಿ ಮಗ್ನರಾಗಿರುತ್ತಾರೆ. ಮಾತನಾಡುತ್ತಲೋ, ಸಂಗೀತ ಕೇಳುತ್ತಲೇ ಮೈಮರೆತಿರುತ್ತಾರೆ.  ಹಿಂದಿನಿಂದ, ದಿಚಕ್ರ ವಾಹನದ ಮೇಲೆ ಬರುವ ದುಷ್ಕರ್ಮಿಗಳು ನಿಮ್ಮ ಕೈಯಿಂದ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗುತ್ತಾರೆ.

ಇಂತಹದೊಂದು  ರೌಡಿ ಗ್ಯಾಂಗ್ ಹುಟ್ಟಿಕೊಂಡಿದೆ. ಇಂತಹ ಮೂರ್ನಾಲ್ಕು ಘಟನೆಗಳು ಬೆಂಗಳೂರಿನ ಬಿಟಿಎಂ ಬಡವಾಣೆಯಲ್ಲಿ ನಡೆದಿವೆ. ದುರ್ದೈವಕ್ಕೆ ನಾನೂ ಮೊನ್ನೆ ಇದಕ್ಕೆ ಬಲಿಯಾಗಿದ್ದೇನೆ. ಆದಕಾರಣ ಜನರಲ್ಲಿ ನನ್ನ ವಿನಂತಿ: ರಸ್ತೆ ಮೇಲೆ ನಡೆದಾಡುವಾಗ ಮೊಬೈಲ್‌ ಬಳಸಬೇಡಿ. ಮನೆಯೋ, ಕಚೇರಿಯೋ ಇಲ್ಲವೇ ಮತ್ತೆ ಯಾವುದಾದರೂ ಸುರಕ್ಷಿತ ಸ್ಥಳ ತಲುಪಿದ ಮೇಲೆ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT