ADVERTISEMENT

‘ರಾಮನ ಧರ್ಮ’...?

ಆರ್.ಕೆ.ದಿವಾಕರ
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST

ರಾಮನ ಅಸ್ತಿತ್ವದ ಬಗ್ಗೆ ಸಿ.ಎಸ್‌. ದ್ವಾರಕಾನಾಥ್ ಪ್ರಶ್ನಿಸಿದ್ದು (ಪ್ರ.ವಾ., ಡಿ. 7) ವಿವೇಕವಲ್ಲ.

‘ರಾಮ’ ಎನ್ನುವ ಪಾತ್ರ ಇತಿಹಾಸದಲ್ಲಿ ಲುಪ್ತವಾಗಿರಬಹುದಾದರೂ, ದೇಶದ ಬಹುಸಂಖ್ಯಾತರ ಆದರ್ಶ ಮತ್ತು ಮೌಲ್ಯಗಳ ಸಂಕೇತವಾಗಿ ಆ ಪರಿಕಲ್ಪನೆಗೆ ಅಸ್ತಿತ್ವ ಉಂಟು. ಆದರೆ ‘ರಾಮಧರ್ಮ’ ಎಂಬುದೊಂದು ದೇಶದಲ್ಲಿ ಪ್ರಚಾರದಲ್ಲಿಲ್ಲ. ಇದು ಏಕೆ ಎಂದು ಪ್ರಶ್ನಿಸುವ ಸಾಧ್ಯತೆ ಇಲ್ಲಿರುವಂತೆ ‘ಇಸ್ಲಾಂ’ ಎಂಬ ಧರ್ಮದಲ್ಲಿಲ್ಲ!

ಇಲ್ಲಿ, ರಾಮ, ಕೃಷ್ಣ, ಕಾಳಿ, ರುದ್ರ, ವೀರಭದ್ರ ಇತ್ಯಾದಿ ನಾನಾ ದೈವತ್ವಗಳು, ಒಂದೊಂದು ಬಾರಿ ಒಂದೊಂದು ಮಿಕ್ಕೆಲ್ಲವುಗಳಿಗಿಂತ ಮಿಗಿಲಾಗುವ ವಿರೋಧಾಭಾಸವೂ ಇಲ್ಲುಂಟು. ಒಂದೊಂದು ಗುಂಪು ಒಂದೊಂದು ಆಚಾರವನ್ನು ತಮ್ಮದೆಂದು ಸ್ವೀಕರಿಸಿ, ಮಿಕ್ಕೆಲ್ಲವನ್ನೂ ನಿಕೃಷ್ಟವಾಗಿ ಕಾಣುವುದೂ ಸಾಮಾನ್ಯ!

ADVERTISEMENT

ಹೆರವರ್‍ಯಾರೋ ಇದನ್ನೆಲ್ಲಾ ಸಾರಾಸಗಟಾಗಿ ‘ಹಿಂದೂ’ ಎಂದು ಕರೆದುಬಿಟ್ಟರು; ನಾವು ಅ ಹೆಸರನ್ನು ಕೈಚಾಚಿ ಸ್ವೀಕರಿಸಿದೆವು! ಒಳಗೊಂದು ಏಕಸ್ರೋತವಿದೆ ಎಂದೇನೋ ಹೇಳುತ್ತಾರೆ. ಆದರೆ ಮೇಲ್ನೋಟಕ್ಕೆ ‘ಹಿಂದೂ’ ಒಂದು ಗೊಂದಲದ ಗೂಡು. ಇಡೀ ದೇಶಕ್ಕೇ ಆ ಹೆಸರು! ಇದು ‘ಭಾರತೀಯತೆ’ಯ ದುರ್ದೈವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.