ADVERTISEMENT

ರಾಷ್ಟ್ರಗೀತೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST

ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆ ಹಾಡಬೇಕು ಮತ್ತು ಈ ಸಂದರ್ಭದಲ್ಲಿ ಜನರು ಗೌರವಪೂರ್ವಕವಾಗಿ ಎದ್ದು ನಿಲ್ಲಬೇಕು, ಜೊತೆಗೆ ಸಿನಿಮಾ ಪರದೆಯಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶ ಶ್ಲಾಘನೀಯ.

ಮೂರು ಗಂಟೆಗಳ ಕಾಲ ಚಲನಚಿತ್ರವನ್ನು ತಾಳ್ಮೆಯಿಂದ ವೀಕ್ಷಿಸಬಹುದಾದಲ್ಲಿ, ನಮ್ಮ ರಾಷ್ಟ್ರಗೀತೆಗೆ ಗೌರವ ಕೊಡಲು ಎರಡು ನಿಮಿಷ ವ್ಯಯಿಸಬಹುದಲ್ಲವೇ? ಹಿಂದೆ ಸಿನಿಮಾ ಆರಂಭಕ್ಕೆ ಮುನ್ನ ಪರದೆಯಲ್ಲಿ ದೇಶದ ಆಗುಹೋಗುಗಳ ಸುದ್ದಿಗಳನ್ನು ಬಿತ್ತರಿಸುತ್ತಿದ್ದರು. ಕಾಲಘಟ್ಟದ ಬದಲಾವಣೆಯಲ್ಲಿ ಹಳತು ಕೊಚ್ಚಿ ಹೋಗಿ, ಜಾಹೀರಾತುಗಳ ಪ್ರದರ್ಶನ ಮೆರೆಯುತ್ತಿದೆ. ಇಂತಹ ಸಂದರ್ಭದಲ್ಲಿ, ರಾಷ್ಟ್ರಗೀತೆಗೆ ಆದ್ಯತೆ ನೀಡಬೇಕು ಎನ್ನುವ ಆದೇಶ ಸರಿಯಾದುದು.
-ಪೂರ್ಣಿಮಾ ಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.