ADVERTISEMENT

ವಾರದ ರಜೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪೆಟ್ರೋಲಿಯಂ ಉತ್ಪನ್ನಗಳನ್ನು ಮಿತವಾಗಿ ಬಳಸುವಂತೆ ದೇಶದ ನಾಗರಿಕರಿಗೆ ಇತ್ತೀಚೆಗೆ ಕರೆ ನೀಡಿದ್ದರು. ಮುಂದಿನ ಪೀಳಿಗೆಯ ಹಿತರಕ್ಷಣೆಗೆ ಆದ್ಯತೆ ನೀಡುವ ವಿಚಾರ ಇದಾಗಿತ್ತೇ ವಿನಾ ಪೆಟ್ರೋಲ್ ಬಂಕ್‌ಗಳಿಗೆ ವಾರದ ರಜೆ ನೀಡುವುದಾಗಿರಲಿಲ್ಲ.

ವಾಹನಗಳ ಅಥವಾ ಇಂಧನ ಮಿತ ಬಳಕೆಯ ದೂರದೃಷ್ಟಿಯು ವಾರದ ರಜೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲವೆಂದು ಪೆಟ್ರೋಲಿಯಂ ಸಚಿವಾಲಯವೂ ಸ್ಪಷ್ಟಪಡಿಸಿದೆ. ಆದರೆ ದಕ್ಷಿಣ ಭಾರತದ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಭಾನುವಾರ ಬಂಕ್‌ಗಳನ್ನು ಮುಚ್ಚುವ ನಿಲುವು ತಳೆದಿದೆ. ಇದರ ನೇರ ಪರಿಣಾಮ ಸಾರ್ವಜನಿಕರ ಮೇಲೆ ಆಗುತ್ತದೆ. ಆದ್ದರಿಂದ ಈ ಬಗ್ಗೆ ಬಂಕ್ ಮಾಲೀಕರು ಮತ್ತೊಮ್ಮೆ ಚಿಂತನೆ ನಡೆಸುವುದು ಒಳಿತು.
–ಸುದರ್ಶನ ಎಚ್. ಯಡಹಳ್ಳಿ, ಬೆನಕಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT