ADVERTISEMENT

ವಾಹನಗಳ ದಟ್ಟಣೆ

ಎಚ್‌.ಆರ್‌.ದೇಸಾಯಿ
Published 12 ಜುಲೈ 2015, 19:35 IST
Last Updated 12 ಜುಲೈ 2015, 19:35 IST

ಬೆಂಗಳೂರು ನಗರಕ್ಕೆ ಪ್ರತಿನಿತ್ಯ ಸಾವಿರಾರು ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಹೊಸತಾಗಿ ಸೇರ್ಪಡೆಯಾಗುತ್ತಲೇ ಇವೆ. ಈಗಾಗಲೇ ಇರುವ ಹಳೇ ವಾಹನಗಳ ದಟ್ಟಣೆಯಿಂದ ರಸ್ತೆಗಳು ನಲುಗಿವೆ.  ಮತ್ತೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ವಾಹನಗಳ ದಟ್ಟಣೆಯಿಂದ ರಸ್ತೆಗಳ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಅದನ್ನು ತಾಳಲಾರದೆ ಗುಂಡಿಗಳು ಬಿದ್ದು ಬಿದ್ದೂ ಇನ್ನೂ ನಲುಗಿ ಹೋಗುತ್ತಿವೆ.

ಇದರ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸೋಜಿಗ. ಮುಂದೊಂದು ದಿನ ಆಕಾಶದಿಂದ ನೋಡಿದರೂ ರಸ್ತೆಗಳೇ ಕಾಣದ ಸ್ಥಿತಿ ಎದುರಾಗಬಹುದು. ರಸ್ತೆ ಬದಲಿಗೆ  ವಾಹನಗಳ ಟಾಪ್‌ಗಳೇ ಕಾಣಬಹುದು. ಸಮಸ್ಯೆ ಕೈಮೀರುವ ಮುಂಚೆ ಇದಕ್ಕೆ ಏನಾದರೂ ಪರಿಹಾರ ಹುಡುಕುವ ಅಗತ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.