ADVERTISEMENT

ವಿದ್ಯಾರ್ಥಿಗಳ ಬಳಕೆ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST

ರಾಜ್ಯದಲ್ಲಿ ಗೋಯಾತ್ರೆಯೊಂದು ನಡೆಯುತ್ತಿದೆ. ಭಾರತೀಯರ ಧಾರ್ಮಿಕ ಭಾವನೆಗಳಲ್ಲಿ ಹಾಸುಹೊಕ್ಕಾಗಿರುವ ಗೋವು ಮತ್ತು ಹಂದಿಗಳೆರಡರ ಸೂಕ್ಷ್ಮ ವಿಚಾರವಾಗಿಯೇ ಈ ದೇಶದಲ್ಲಿ ‘ಸಿಪಾಯಿ ದಂಗೆ’ ಎನ್ನುವ ಕ್ರಾಂತಿಯೊಂದು ಬ್ರಿಟಿಷ್ ಆಳ್ವಿಕೆಯಲ್ಲಿಯೇ ನಡೆದಿತ್ತು. 

ಕಾಮಧೇನು ಎಂದು ಕರೆಸಿಕೊಂಡಿರುವ ಭಾರತೀಯ ತಳಿಯ ಗೋವಿನ  ಉಪಯೋಗಗಳಿಂದಾಗಿ ಅವುಗಳ ರಕ್ಷಣೆ ಎಲ್ಲ ಭಾರತೀಯರ ಕರ್ತವ್ಯ ಎಂದಿಟ್ಟುಕೊಂಡು ಈ ಗೋಯಾತ್ರೆಯನ್ನು ಸ್ವಾಗತಿಸೋಣ. ಆದರೆ ಇದರ ನೇತೃತ್ವವನ್ನು ವಹಿಸಿರುವ ರಾಘವೇಶ್ವರ ಭಾರತಿ ಸ್ವಾಮಿಗಳು ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾರೆ. 

ಇಂಥವರ ನೇತೃತ್ವದಲ್ಲಿ ನಡೆಯುತ್ತಿರುವ ಗೋಯಾತ್ರೆ ಜನರ ಭಾವನೆಗಳನ್ನು ಬೇರೆಡೆ ತಿರುಗಿಸಿ, ಅನುಕಂಪ ಗಳಿಸಿ ಕಾನೂನಿನ ಕಣ್ಣಿಗೆ ಮಣ್ಣೆರಚುವ ನಾಟಕವೆಂದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಗೋಯಾತ್ರೆ ಹೋದಲ್ಲೆಲ್ಲ ಶಾಲಾ ಮಕ್ಕಳನ್ನು ಮೆರವಣಿಗೆಯಲ್ಲಿ ಹಾಡು ಕುಣಿತಕ್ಕೆ ಬಳಸಲಾಗುತ್ತಿದೆ.

ಇಂಥ ಚಾರಿತ್ರ್ಯದ ವ್ಯಕ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿಸುವುದನ್ನು ನೋಡಿದರೆ ವಿದ್ಯಾರ್ಥಿಗಳಿಗೆ ಯಾವ ನೈತಿಕ ಪಾಠವನ್ನು ಹೇಳಿಕೊಟ್ಟಂತಾಗುತ್ತದೆ?  ಈ ಗೋಯಾತ್ರೆಯಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳದಂತೆ ಶಿಕ್ಷಣ ಇಲಾಖೆ  ಕ್ರಮ ಕೈಗೊಳ್ಳಬೇಕು.
-ಪ್ರಕಾಶ್ ಕಾಕಾಲ್, ಹೆಗ್ಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.