ADVERTISEMENT

ವಿದ್ಯಾರ್ಥಿಗಳ ಸಿರಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 19:30 IST
Last Updated 27 ಜೂನ್ 2016, 19:30 IST

ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿದ್ಯಾಸಿರಿ ಯೋಜನೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗಿದೆ. ದೂರದ ಊರಿಗೆ ಬಂದು ಓದುವ ಕಷ್ಟದ ಜೊತೆಗೆ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ದುಸ್ತರ. ಹೀಗಾಗಿ ಹಾಸ್ಟೆಲ್‌ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯ ತಿಂಗಳಿಗೆ ₹ 1500ರಂತೆ ವರ್ಷದ ಹತ್ತು ತಿಂಗಳು ಸರ್ಕಾರ ನೇರವಾಗಿ ಅವರ ಖಾತೆಗೆ ಪಾವತಿ ಮಾಡುತ್ತದೆ. ಹೀಗಾಗಿ ವಿದ್ಯಾಸಿರಿ ಯೋಜನೆ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ.

ಆದರೆ  ಯೋಜನೆ ಕುರಿತು ಪ್ರಚಾರದ ಕೊರತೆ ಇದೆ. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸರ್ಕಾರ  ಎಡವುತ್ತಿರುವುದು ನ್ಯೂನತೆಯಾಗಿದೆ. ಹೆಚ್ಚು ಪ್ರಚಾರ ಮಾಡಿ ಅರ್ಹ ವಿದ್ಯಾರ್ಥಿಗಳಿಗೆ ಯೋಜನೆಯ ಫಲವನ್ನು ತಲುಪಿಸುವುದರ ಜೊತೆಗೆ, ಎಲ್ಲ ವರ್ಗಗಳ ಬಡ ವಿದ್ಯಾರ್ಥಿಗಳಿಗೂ ಅದನ್ನು ವಿಸ್ತರಿಸಿ ಅವರ ಉನ್ನತ ವ್ಯಾಸಂಗಕ್ಕೆ ಉತ್ತೇಜನ ನೀಡಬೇಕು.
- ಮಿಡಿಗೇಶಿ ಶಿವರಾಮ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.