ADVERTISEMENT

ವ್ಯವಸ್ಥೆ ಸರಿಪಡಿಸಿ

ಕುಂದು ಕೊರತೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST
ಸಾಂದರ್ಭಿಕ ಚಿತ್ರ                - ಚಿತ್ರ: ವಿಶ್ವನಾಥ ಸುವರ್ಣ‌
ಸಾಂದರ್ಭಿಕ ಚಿತ್ರ - ಚಿತ್ರ: ವಿಶ್ವನಾಥ ಸುವರ್ಣ‌   

ಎಂ.ಜಿ.ರಸ್ತೆಯಲ್ಲಿರುವ ಪ್ರೀಪೇಯ್ಡ್‌ ಆಟೊ ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ಆಟೊ ದೊರೆಯದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಇದೆ. ಈ ಪ್ರೀಪೇಯ್ಡ್‌ ಆಟೊ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆ ‘ಎಂಗಾಡಿ’ಗೆ ವಹಿಸಿದಾಗಿನಿಂದ ಆಟೊ ಚಾಲಕರು ತಮಗೆ ಬೇಕಾದ ಸ್ಥಳಗಳಿಗೆ ಮಾತ್ರ ಬರಲು ಮುಂದಾಗುತ್ತಿದ್ದಾರೆ. ಪ್ರಯಾಣಿಕರು ಕರೆದ ಕಡೆಗೆ ಬರುವುದಿಲ್ಲ. ಇದಕ್ಕೆ ‘ಎಂಗಾಡಿ’ ಸಿಬ್ಬಂದಿಯ ಸಹಕಾರವೂ ಇದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

ಈ ಹಿಂದೆ ಪೊಲೀಸರು ಈ ವ್ಯವಸ್ಥೆಯನ್ನು ನಿರ್ವಹಿಸುವಾಗ ಎಲ್ಲವೂ ಸರಿಯಾಗಿತ್ತು. ಈಗ ಆಟೊ ಚಾಲಕರ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಕಾನೂನಿನ ಪ್ರಕಾರ ಆಟೊ ಚಾಲಕರು ಪ್ರಯಾಣಿಕರು ಕರೆದಾಗ ಬರುವುದಿಲ್ಲ ಎಂದು ಹೇಳುವಂತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಕ್ರಮ ಜರುಗಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.