ADVERTISEMENT

ಸರ್ಕಾರಿ ನೌಕರರಲ್ಲ

ಎಸ್.ಆರ್.ಜೋಶಿ
Published 5 ಅಕ್ಟೋಬರ್ 2015, 19:34 IST
Last Updated 5 ಅಕ್ಟೋಬರ್ 2015, 19:34 IST

ಅಂತರಾಳ ಪುಟದಲ್ಲಿ (ಪ್ರ.ವಾ., ಅ. 3) ಸಂಸದರ ವೇತನಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರು ತಿಂಗಳಿಗೆ ₹ 3 ಲಕ್ಷ ವೇತನ ಬೇಕೆಂದು (ಇತರ ಎಲ್ಲ ಭತ್ಯೆಗಳ ಹೊರತಾಗಿ) ಕೇಳಿರುವುದು ನೋಡಿ ನಗಬೇಕೋ ಅಳಬೇಕೋ ತಿಳಿಯದಾಯ್ತು. ಭಾರತದಂಥ ಅಭಿವೃದ್ಧಿಶೀಲ ದೇಶದ ಯುವ ಸಂಸದರು ಇಟ್ಟ ಬೇಡಿಕೆ ಇದು! ಅವರು ಅದರೊಂದಿಗೆ ತಮ್ಮ ಮನೆ ಖರ್ಚಿನ ಪಟ್ಟಿಯನ್ನೇ ಕೊಟ್ಟಿದ್ದಾರೆ.

ಸಂಸದರು ಸರ್ಕಾರಿ ನೌಕರರಲ್ಲ. ಅವರು ಪಡೆಯುವುದು ಗೌರವ ಧನವನ್ನು. ಆದ್ದರಿಂದ ಇದೇ ಆದಾಯ ನಂಬಿಕೊಂಡು ಬದುಕುತ್ತಿರುವಂತೆ ಸಂಬಳ ಕೇಳುವುದು ಎಷ್ಟರಮಟ್ಟಿಗೆ ಸರಿ?  ಈ ಸಂಸದ್‌ಗಿರಿ ಹೋಗಿಬಿಟ್ಟರೆ ಇಷ್ಟೊಂದು ಖರ್ಚನ್ನು ಅವರು ಹೇಗೆ ನಿಭಾಯಿಸುತ್ತಾರೆ?

ಅವರು ಒಂದು ಕ್ಷಣ ಈ ದೇಶದ ಕಟ್ಟಕಡೆಯ ಪ್ರಜೆ ಬದುಕುತ್ತಿರುವ ಚಿತ್ರವನ್ನು ನೆನಪಿಸಿಕೊಳ್ಳಲಿ. ಪತ್ರಕರ್ತರಾಗಿದ್ದ ಅವರಿಗೆ ಇದೆಲ್ಲ ತಿಳಿಯದಿರುವಂಥದ್ದೇನೂ ಅಲ್ಲ. ಇವರ ಅಭಿಪ್ರಾಯದ ಕೆಳಗೇ ಬಸವರಾಜ ರಾಯರೆಡ್ಡಿ ಅವರು ‘ಸಂಸದರು ವೇತನದಿಂದಲೇ ಜೀವನ ನಿರ್ವಹಣೆ ಮಾಡಬಾರದು’ ಎಂದು ಹೇಳಿರುವುದು ಪ್ರತಾಪ ಸಿಂಹ ಅವರಿಗೆ ಕೊಟ್ಟಿರುವ ಉತ್ತರದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.