ADVERTISEMENT

ಸಾಹಿತಿಗಳಿಗೆ ಇದು ಬೇಕಾ?

ರಾಘವೇಂದ್ರ ರಾವ್, ಆರ್.ಹೊಸಪೇಟೆ
Published 29 ಏಪ್ರಿಲ್ 2013, 19:59 IST
Last Updated 29 ಏಪ್ರಿಲ್ 2013, 19:59 IST

ಮೊನ್ನೆ ಪತ್ರಿಕೆಯಲ್ಲಿ `ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ' ಅಂತ ಕರೆ ಕೊಟ್ಟ ಸಾಹಿತಿಗಳ ಸಾಲಿನ ಫೋಟೋ ಇತ್ತು. ಯು.ಆರ್. ಅನಂತಮೂರ್ತಿ, ಕೆ. ಮರುಳ ಸಿದ್ದಪ್ಪ, ಎಸ್. ಜಿ. ಸಿದ್ದರಾಮಯ್ಯ, ರವಿವರ್ಮಕುಮಾರ್, ಬಂಜಗೆರೆ ಜಯಪ್ರಕಾಶ್ ... ದೇವನೂರ ಮಹಾದೇವ ಕೂಡ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಹೇಳಿಕೆ ನೀಡಿದ್ದರು. ದಲಿತ ಸಂಘರ್ಷ ಸಮಿತಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ನಾಗವಾರರ ಬೆಂಬಲದ ಹೇಳಿಕೆಯೂ ಇತ್ತು. ಇನ್ನು ದಲಿತ ಕವಿ ಹನುಮಂತಯ್ಯ ಅಲ್ಲೇ ಇದ್ದಾರೆ.

ಇನ್ನು ಬಿ.ಜೆ.ಪಿ. ಪಕ್ಷದ ಸಾಹಿತಿಗಳು ಕಳೆದ ಐದು ವರ್ಷಗಳಲ್ಲಿ ಬಿಜೆ.ಪಿ ಸರ್ಕಾರದಿಂದ ಎಲ್ಲಾ ಸಕಲ ಸಂಪತ್ತು ಸೌಭಾಗ್ಯ ಸೌಕರ್ಯ ಅನುಭವಿಸಿ ದಿಕ್ಕು ತಪ್ಪಿ ಕೂತಿದ್ದಾರೆ. ದೊಡ್ಡರಂಗೇಗೌಡ,ಸಿದ್ಧಲಿಂಗಯ್ಯ, ಎಸ್.ಎಲ್. ಭೈರಪ್ಪ, ಪ್ರಧಾನ ಗುರುದತ್ತ,  ಬಾನಂದೂರು ಕೆಂಪಯ್ಯ ಮೊದಲಾದವರು ಕಾಂಗ್ರೆಸ್ ಸಾಹಿತಿಗಳನ್ನು ವಿರೋಧಿಸುತ್ತಾ ಕೂಗಾಡುತ್ತಿದ್ದಾರೆ. ಇದನ್ನು ನೋಡಿದರೆ ಸಾಹಿತಿಗಳು ಅವಕಾಶವಾದಿಗಳು ಎನಿಸುತ್ತಿದೆ. ಇದೆಲ್ಲಾ ಬೇಕಾ ಇವರಿಗೆ? ರಾತ್ರಿ ಕಾಂಗ್ರೆಸ್, ಬೆಳಿಗ್ಗೆ ಬಿಜೆಪಿ, ಮಧ್ಯಾಹ್ನ ಕೆಜೆಪಿ, ಸಂಜೆ ರಾಮುಲು ಪಕ್ಷ. ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ ಕೆಜೆಪಿ ಯಲ್ಲಿದ್ದಾರೆ. ಸಾಹಿತಿಗಳಿಗೆ ರಾಜಕೀಯ ಚಮಚಾಗಿರಿ ಬೇಕಾ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.