ADVERTISEMENT

ಸೀರಿಯಲ್ ಆಘಾತ

ಸಿ.ಎನ್.ಮುಕ್ತಾ
Published 1 ಡಿಸೆಂಬರ್ 2017, 19:30 IST
Last Updated 1 ಡಿಸೆಂಬರ್ 2017, 19:30 IST

ಧಾರಾವಾಹಿಯ ದೃಶ್ಯ ಅನುಕರಿಸಲು ಹೋಗಿ ಸಾವಿಗೀಡಾದ ಹರಿಹರದ ಬಾಲಕಿ ಪ್ರಾರ್ಥನಾಳ ಬಗ್ಗೆ ಮನಮಿಡಿಯುತ್ತಿದೆ. ಈ ಸಾವಿಗೆ ಯಾರು ಹೊಣೆ? ಅರಳಬೇಕಾಗಿದ್ದ ಮೊಗ್ಗು ಅರಳುವ ಮೊದಲೇ ಬಾಡಿ ಹೋಯಿತಲ್ಲಾ ಇದು ನ್ಯಾಯವೇ? ಪೋಷಕರು ಸೀರಿಯಲ್ ನೋಡೋದೇ ತಪ್ಪೆ? ಅಥವಾ ಮಕ್ಕಳಿಗೆ ಅವರು ‘ಸೀರಿಯಲ್ ಘಟನೆಗಳನ್ನು ಅನುಸರಿಸು’ ಎಂದು ಹೇಳುತ್ತಾರೆಯೇ?

ಟಿ.ಆರ್.ಪಿ.ಯ ಮೋಹದಿಂದ ನಮ್ಮ ಸೀರಿಯಲ್ ನಿರ್ದೇಶಕರುಗಳು ಭೂತ–ಪ್ರೇತ, ದೆವ್ವ– ದೇವರು, ಮಾಟ–ಮಂತ್ರ, ಜ್ಯೋತಿಷಿಗಳ  ಮೊರೆ ಹೋಗಿರುವುದು ವಿಷಾದದ ಸಂಗತಿ. ಕನ್ನಡ ಭಾಷೆಯಲ್ಲಿ ಒಳ್ಳೆಯ ಕಥೆ, ಕಾದಂಬರಿಗಳಿಲ್ಲವೇ? ಸಿನಿಮಾಗೆ ಇರುವಂತೆ ಸೀರಿಯಲ್‌ಗಳಿಗೂ ಸೆನ್ಸಾರ್ ಮಂಡಳಿಯ ಅವಶ್ಯಕತೆ ಖಂಡಿತಾ ಇದೆ. ಸರ್ಕಾರ ಮೌಢ್ಯ ನಿಷೇಧ ಮಸೂದೆ ಅಂಗೀಕಾರ ಮಾಡಿರುವಾಗ ಈ ತರಹದ ಧಾರಾವಾಹಿಗಳಿಗೆ ಕಡಿವಾಣ ಅತ್ಯಗತ್ಯ. ನಿರ್ಮಾಪಕ–ನಿರ್ದೇಶಕರು ಈ ನಿಟ್ಟಿನಲ್ಲಿ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT