ADVERTISEMENT

ಸೇವಾ ಶುಲ್ಕ ರದ್ದಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ನವೆಂಬರ್ 2017, 3:51 IST
Last Updated 15 ನವೆಂಬರ್ 2017, 3:51 IST

ವಿಜಯಾ ಬ್ಯಾಂಕ್‌ನ ಮಂಡ್ಯ ಶಾಖೆಯಲ್ಲಿ ನಾನು ಉಳಿತಾಯ ಖಾತೆ ಹೊಂದಿದ್ದೇನೆ. ಆರ್‌.ಬಿ.ಐ. ನೀಡಿರುವ ಸೂಚನೆಯೋ ಅಥವಾ ಇನ್ಯಾವ ಕಾರಣವೋ, ಕಳೆದ ಐದು ತಿಂಗಳುಗಳಿಂದ ‘ಸೇವಾ ಶುಲ್ಕ’ವೆಂದು ತಲಾ ₹ 65 ರಂತೆ ಖಾತೆಯಿಂದ ಕಡಿತಗೊಳಿಸಲಾಗಿದೆ.

ಕೂಲಿ ಮಾಡಿ, ಅಲ್ಪ–ಸ್ವಲ್ಪ ಹಣ ಉಳಿಸಿ, ಬ್ಯಾಂಕ್‌ ಖಾತೆಯಲ್ಲಿಟ್ಟು ವ್ಯವಹರಿಸಿದರೆ, ನಮ್ಮ ಹಣಕ್ಕೆ ನಾವೇ ಸೇವಾ ಶುಲ್ಕ ಕಟ್ಟುವಂತಾಗಿರುವುದು ದುರ್ದೈವ. ಹೀಗಾದರೆ ಖಾತೆಯನ್ನಾದರೂ ಏಕೆ ಹೊಂದಬೇಕು? ಎಲ್ಲರೂ ಬ್ಯಾಂಕ್‌ ಖಾತೆ ಹೊಂದಬೇಕು ಎಂದು ಪ್ರಧಾನಿ ಹೇಳುತ್ತಾರೆ. ಆ ಮೂಲಕ ಜನಸಾಮಾನ್ಯರನ್ನು ದೋಚುವ ಉದ್ದೇಶ ವಿರಬಹುದೇ ಎಂಬ ಸಂದೇಹ ಈಗ ಮೂಡುತ್ತದೆ.

ಆರ್‌.ಬಿ.ಐ.ನವರು ಕೂಡಲೇ ನಿಯಮದಲ್ಲಿ ಬದಲಾವಣೆ ಮಾಡಿ, ಉಳಿತಾಯ ಖಾತೆಯಲ್ಲಿ ಇಡಬೇಕಾದ ಕನಿಷ್ಠ ಮೊತ್ತವನ್ನು ₹ 500ಕ್ಕೆ ನಿಗದಿ ಮಾಡಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.