ADVERTISEMENT

ಹಿಮ್ಮುಖ ಚಲನೆ!

ಡಾ.ಜಿ.ಶಿವಪ್ಪ ಅರಿವು, ಕೋಲಾರ
Published 20 ಏಪ್ರಿಲ್ 2015, 19:30 IST
Last Updated 20 ಏಪ್ರಿಲ್ 2015, 19:30 IST

ಕಾಲ ಬದಲಾಗುತ್ತಿದ್ದು, ಹಿಂದಿನ ತಪ್ಪುಗಳು ಮುಂದೆ ಸರಿಹೋಗುತ್ತವೆ ಎಂದು ಭಾವಿಸುವಂತಿಲ್ಲ. ‘ಲಿಂಗ ಸಮಾನತೆ ಅರ್ಥಹೀನ’ ಎಂಬ ಶೀರ್ಷಿಕೆಯಡಿ (ಪ್ರ.ವಾ., ಏ.19) ಪ್ರಕಟವಾದ ಸಿ.ಎಂ.ಸಿ.ಎ ಸಮೀಕ್ಷೆಯನ್ನು ಗಮನಿಸಿದಾಗ ಆಘಾತವಾಯಿತು.

ಬೇರೆ ಬೇರೆ ಧರ್ಮಗಳ ಹುಡುಗ-ಹುಡುಗಿಯರು ಒಂದೆಡೆ ಸೇರುವುದನ್ನು ನಿಷೇಧಿಸಬೇಕು ಎಂದು ಶೇ 65ರಷ್ಟು ಕಾಲೇಜು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ. ಮನೆ ಕೆಲಸ, ಕಟ್ಟಡ ಕಾಮಗಾರಿಯಲ್ಲಿ ತೊಡಗಿರುವ ಕೂಲಿಗಳು ಹೆಚ್ಚಿನ ಸವಲತ್ತುಗಳನ್ನು ಕೇಳಬಾರದೆಂದು ಯುವಕರು ಹೇಳಿದ್ದಾರೆ. ಸಂವಿಧಾನದ ಆಶಯ ಬಡಮೇಲು ಆಗಿರುವುದು ಇದರಿಂದ ಗೊತ್ತಾಗುತ್ತದೆ.

ನ್ಯಾಯಬದ್ಧ ಮತ್ತು ತರ್ಕಬದ್ಧ ಬದಲಾವಣೆ ತರುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ ಎಂಬುದು  ಈ ಸಮೀಕ್ಷೆಯಿಂದ ದೃಢಪಟ್ಟಿದೆ. ಈಗಲಾದರೂ ನಮ್ಮ ಶಿಕ್ಷಣವನ್ನು ಸರಿಮಾಡಲು ಚಿಂತಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.