ADVERTISEMENT

ಹೊಲ ಹೋಗಿ ನಿವೇಶನವಾಯ್ತು...

ಪ್ರೊ ಎ.ಎಲ್.ನಾಗೂರ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾದಂತೆ ನಿವೇಶನ, ಬಡಾವಣೆಗಳ  ಸಂಖ್ಯೆ ದ್ವಿಗುಣ­ಗೊಳ್ಳ­ತೊಡಗಿತು. ಹಿಡಿಯಷ್ಟಿರುವ ನಿವೇಶನ ಕೊಳ್ಳ­ಲಿಕ್ಕೆ ಲಕ್ಷ–ಕೋಟಿಗಳಲ್ಲೇ ಗುಣಿಸ­ಬೇಕಾದ ಪ್ರಮೇಯ ಬಂದಿದೆ.

ರಸ್ತೆಯ ಬದಿಯ ಕೃಷಿಭೂಮಿಗಂತೂ ಭಾರೀ ಬೇಡಿಕೆ. ಇಕ್ಕಟ್ಟಾಗಿ ಒಕ್ಕಟ್ಟಾಗಿ ಇದ್ದ ಊರು­ಗಳೆಲ್ಲ ಈಗ ಹತ್ತು ಹನ್ನೆರಡು ಕಿಲೋ­ಮೀಟರ್‌­ಗಳವರೆಗೆ ಬಡಾವಣೆಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಕಾಡುಗಳಾಗಿವೆ. ಹಳೆಯ ಸಂಸ್ಕೃತಿಯನ್ನು ಬಿಸುಟು ನಗರೀ­ಕರಣದತ್ತ ಸಾಗುತ್ತಿರುವ ಈ ಧಾವಂತ ಆತಂಕಕಾರಿ.

ಕೃಷಿಯ ಏಳು–ಬೀಳುಗಳನ್ನು ಸಹಿಸಿ­ಕೊಳ್ಳಲಾಗದ ಕೆಲವರು ಅನ್ನದಾತೆಯನ್ನು ಮಾರಿ ಸಖತ್ತು ದುಡ್ಡನ್ನು ಎಣಿಸುತ್ತಿದ್ದಾರೆ. ಹಿಂದೆ ಬಸ್ಸು, ರೈಲಿನಲ್ಲಿ ಪ್ರಯಾಣಿಸುತ್ತಿರು­ವಾಗ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದ ಹೊಲ, ತೋಟ ತುಡಿಕೆಗಳು ಇಂದು  ಕಾಂಕ್ರೀಟ್ ಕಾಡುಗಳಾಗಿವೆ. ಏರುತ್ತಿರುವ ತರಕಾರಿ, ಕಾಳು–ಧಾನ್ಯ ದರಗಳು, ಸಾಲದ ಸಂಬಳ, ಆಸ್ಪತ್ರೆ ತುಂಬ ರೋಗಿಗಳ
ನರಳಾಟ. ಇದು ನಮ್ಮ ಪರಿಸ್ಥಿತಿ. ಇದ್ದ ಹೊಲ–ಗದ್ದೆ ಕಾಯ್ದುಕೊಂಡಿದ್ದರೆ ಇಂಥ ಪರಿಸ್ಥಿತಿ ಬರುತ್ತಿತ್ತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.