ADVERTISEMENT

‘ಲೋಕಲ್‌ ಟ್ರೇನ್‌’...

ಎಲ್‌.ಅರುಣಕುಮಾರ್‌, ದಾವಣಗೆರೆ
Published 3 ಜುಲೈ 2015, 19:30 IST
Last Updated 3 ಜುಲೈ 2015, 19:30 IST

ಎಲ್ಲೆಡೆ ಹೆಚ್ಚುತ್ತಿರುವ ವಾಹನಗಳು ಮತ್ತು ಅಪಘಾತಗಳ ಬಗ್ಗೆ ರಾಜ್ಯ ಅಥವಾ ಕೇಂದ್ರ ಸರ್ಕಾರ ಗಂಭೀರವಾಗಿ ಗಮನಹರಿಸದೇ ಇರುವುದು ಆತಂಕದ ವಿಚಾರ. ಇಂದು ಯಾವುದೇ ಜಿಲ್ಲಾ ಕೇಂದ್ರದ ರಸ್ತೆಗಳಲ್ಲಿ ಸಂಚರಿಸುವುದು ಎಂದರೆ ಭಾರಿ ತ್ರಾಸದಾಯಕ ಎನಿಸಿದೆ. ಸ್ವಾತಂತ್ರ್ಯ ಬಂದಾಗ ರಸ್ತೆಗಳು ಹೇಗಿದ್ದವೋ ಇಂದೂ ಅದೇ ಸ್ಥಿತಿಯಲ್ಲೇ ಎಷ್ಟೋ ರಸ್ತೆಗಳಿವೆ. ಹೀಗಾಗಿ ದಿನೇ ದಿನೇ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.

ಈ ದಿಸೆಯಲ್ಲಿ ರೈಲ್ವೆ ಸಂಚಾರವನ್ನು ಸರಳೀಕರಣಗೊಳಿಸಿದರೆ ಹೆಚ್ಚು ಸೂಕ್ತ ಎಂದೆನಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಮೂರು ಅಥವಾ ನಾಲ್ಕು ಜಿಲ್ಲೆಗಳನ್ನು ಸುತ್ತುವರಿದಂತೆ ‘ಲೋಕಲ್‌ ಟ್ರೇನ್‌’ ಮಾರ್ಗವನ್ನು ರೂಪಿಸುವುದು ಸೂಕ್ತ. ಇದರಿಂದ ಸರಕು ಸಾಗಣೆಗೂ ಹೆಚ್ಚಿನ ಅನುಕೂಲವಾಗುತ್ತದೆ ಹಾಗೂ ಮಹಾನಗರಗಳನ್ನು ಅರಸಿ ಉದ್ಯೋಗಕ್ಕೆ ತೆರಳುವವರ ಸಂಖ್ಯೆಯೂ ಕಡಿಮೆಯಾಗಿ ಈಗಿರುವ ಜಿಲ್ಲಾ ಕೇಂದ್ರಗಳೇ ಅಭಿವೃದ್ಧಿ ಹೊಂದುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮಗ್ರ ಅಧ್ಯಯನ ನಡೆಸಿ ತಜ್ಞರಿಂದ ಸೂಕ್ತ ಯೋಜನೆಯೊಂದನ್ನು ರೂಪಿಸಿ ಕೇಂದ್ರಕ್ಕೆ ಮನವಿ ಸಲ್ಲಿಸುವುದು ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.