ADVERTISEMENT

ಈಗಲಾದ್ರೂ ಸ್ಟ್ರಾಂಗ್‌ ಆಗ್ರೀ ಮೇಡಂ...!

ಡಿ.ಬಿ, ನಾಗರಾಜ
Published 13 ಮೇ 2017, 19:30 IST
Last Updated 13 ಮೇ 2017, 19:30 IST

ವಿಜಯಪುರ: ‘ವಿಜಯಪುರದ ಜನರು ಹನಿ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಅಹೋರಾತ್ರಿ ನೀರಿನದ್ದೇ ಜಪ ಮಾಡ್ತ್ವಾರೆ. ನೆರೆಯ ಸೊಲ್ಲಾಪುರ ಮೇಯರ್ ಮಹಾರಾಷ್ಟ್ರ ಮುಖ್ಯಮಂತ್ರಿ ಭೇಟಿ ಮಾಡಿ ನಮ್ಮಿಂದಲೇ ನೀರು ಬಿಡಿಸ್ಕೊಂಡ್ವರೆ... ನಮ್ಮ ನಗರ ಶಾಸಕ್ರು ನಿದ್ದೆ ಮಾಡಕತ್ಯ್ವಾರೆ. ಪೊಲೀಸ್ ಠಾಣೆಗಳಿಗೆ ದೂರು ನೀಡಿದರೂ ಪ್ರಯೋಜನವಾದಂಗಿಲ್ಲ. ಜರಾ ನೀವಾದ್ರೂ ಸ್ಟ್ರಾಂಗ್‌ ಆಗ್ರೀ ಮೇಡಂ, ನಮ್ಮ ಜನರ ನೀರಿನ ಸಮಸ್ಯೆ ಬಗೆಹರಿಸಿ...’

ಈಚೆಗೆ ನಡೆದ ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ರಾಹುಲ ಜಾಧವ ಮೇಯರ್‌ ಅನೀಸ್‌ ಫಾತಿಮಾ ಬಕ್ಷಿ ಅವರ ಕಾಲೆಳೆದ ಪರಿಯಿದು.

‘ನಾವು ನಿಮ್ಮ ಜೊತೆ ಬರ್ತೀವಿ. ಸಿ.ಎಂ. ಸಿದ್ದರಾಮಯ್ಯ ಬಳಿ ನಿಯೋಗ ಹೋಗಿ ‘ಮಹಾರಾಷ್ಟ್ರದವರಿಗೆ ನಾವ್‌ ನೀರ್‌ ಕೊಟ್ಟೀವಿ. ನಮ್ಗ ಅವರಿಂದ ನೀರ್ ಬಿಡಿಸಿ’ ಎಂದು ಕೇಳಿಕೊಳ್ಳೋಣ’ ಎಂದು ಹೇಳಿದರೂ, ಮೇಯರ್ ತುಟಿ ಬಿಚ್ಚಲಿಲ್ಲ.

ADVERTISEMENT

ಸಭೆಯ ವಿಷಯಪಟ್ಟಿಯಲ್ಲಿ ಈ ಬಗ್ಗೆ ಚರ್ಚಿಸಿ, ಠರಾವು ಅಂಗೀಕರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂಬ ಅಜೆಂಡಾ ಇದ್ದರೂ ಮೇಯರ್ ಮಾತ್ರ ಮೌನಗೌರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.