ADVERTISEMENT

ಮಾಡ್ತಾನೆ ಇರೊ ಭಟ್ಟಂಗಿ ಕೆಲಸ. . .

ವಾರೆಗಣ್ಣು

ವೈ.ಗ.ಜಗದೀಶ್‌
Published 5 ಆಗಸ್ಟ್ 2017, 19:30 IST
Last Updated 5 ಆಗಸ್ಟ್ 2017, 19:30 IST

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ತ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಬೈಯಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಲು ವಾರಕ್ಕೊಮ್ಮೆ ಮಾಧ್ಯಮಗೋಷ್ಠಿ ನಡೆಸುವ ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ವಿ.ಎಸ್. ಉಗ್ರಪ್ಪ, ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಕರೆತಂದಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಮಾಧ್ಯಮ ಗೋಷ್ಠಿ ಕರೆದಿದ್ದರು.

ಗೋಷ್ಠಿ ಆರಂಭಕ್ಕೆ ಮುನ್ನ ಅವರ ಕಚೇರಿ ಪ್ರವೇಶಿಸಿದ ಹರಿಶ್ಚಂದ್ರಗೌಡ (ಕಾಂಗ್ರೆಸ್ ಪಕ್ಷ ನನ್ನ ಹೆಸರಿನಲ್ಲೆ ನೋಂದಣಿಯಾಗಿದೆ ಎಂದು ಹೇಳಿಕೊಂಡು ಓಡಾಡುವ ವ್ಯಕ್ತಿ), ‘ಏನು ಪ್ರೆಸ್ ಮೀಟಾ’ ಎಂದು ಪ್ರಶ್ನಿಸಿದರು. ಉಗ್ರಪ್ಪ ಸುಮ್ಮನೆ ಗೋಣು ಅಲ್ಲಾಡಿಸಿದರು.

ಇದನ್ನು ಕಂಡು ಸಿಟ್ಟಿಗೆದ್ದ ಹರಿಶ್ಚಂದ್ರಗೌಡ, ‘ಹೇಳಿದ್ದನ್ನೇ ಹೇಳೊ ಕಿಸಬಾಯಿದಾಸ ನೀನು. ನಿಮಗೆಲ್ಲ ಭಟ್ಟಂಗಿ ಕೆಲಸ ಮಾಡೋದು ಬಿಟ್ಟು ಬೇರೆ ಏನು ಗೊತ್ತಿದೆ? ಮುಂದುವರೆಸು' ಅಂತ ಹೇಳಿ ಹೊರನಡೆದರು.

ADVERTISEMENT

‘ಏನ್ಸಾರ್, ಬೆಳಿಗ್ಗೇನೇ ಹೀಗೆ ಪೂಜೆ ನಿಮಗೆ’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರೆ, ಮತ್ತೊಬ್ಬರು, ‘ಹರಿಶ್ಚಂದ್ರಗೌಡರೂ ಕೆಲವೊಮ್ಮೆ ಸತ್ಯ ಹೇಳ್ತಾರೆ’ ಎಂದು ಕುಟುಕಿದರು.

‘ಸುಮ್ನಿರ್‍ರಪ್ಪಾ, ಕೆಸರಿನ ಮೇಲೆ ಕಲ್ಲು ಹೊಡೆದರೆ ಕಷ್ಟ' ಎಂದು ಹೇಳಿದ ಉಗ್ರಪ್ಪ ಮಾತ್ರ ತಮ್ಮನ್ಮು ತಾವೇ ಸಮಾಧಾನಪಡಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.