ADVERTISEMENT

ಅರೆ... ಸನ್ನಿ ಇದೇನು?

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಅರೆ... ಸನ್ನಿ ಇದೇನು?
ಅರೆ... ಸನ್ನಿ ಇದೇನು?   

ಸನ್ನಿ ಲಿಯೋನ್ ನಟನೆಯ ‘ತೇರಾ ಇಂತ್‌ಜಾರ್‌’ ಬಿಡುಗಡೆಯಾಗುವುದು ನವೆಂಬರ್‌ನಲ್ಲಿ. ಆದರೆ ಈಗ ಇನ್‌ಸ್ಟಾಗ್ರಾಂನಲ್ಲಿ ಸನ್ನಿ ಹಂಚಿಕೊಂಡಿರುವ ಕೆಲವು ಫೋಟೊಗಳು, ಅವರು ಹೊಸ ಚಿತ್ರಕ್ಕಾಗಿ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಸುಳಿವು ನೀಡುತ್ತಿವೆ. ಮುಖಕ್ಕೆ ನೇರಳೆ ಬಣ್ಣದ ಪ್ಯಾಕ್‌ ಹಾಕಿಕೊಂಡಿರುವ ಫೋಟೊ ಎಲ್ಲರ ಗಮನ ಸೆಳೆದಿದೆ.

‘ನನ್ನೊಳಗಿನ ಅಂತಃ ಸತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎಂದು ಸನ್ನಿ ಬರೆದುಕೊಂಡಿದ್ದಾರೆ. 36ರ ಹರೆಯದ ಸನ್ನಿ ಈಗಾಗಲೇ ಸಹಿ ಹಾಕಿರುವ ಚಿತ್ರಗಳ ಸರಣಿಯಲ್ಲಿ ‘ತೇರಾ ಇಂತ್‌ಜಾರ್‌’ ಬೆನ್ನಲ್ಲಿ ಬಿಡುಗಡೆಯಾಗ ಬೇಕಿರುವುದು ‘ಟೀನಾ ಅಂಡ್‌ ಲೊಲೊ’ ಚಿತ್ರ. 2013ರಿಂದಲೂ ಚಿತ್ರೀಕರಣ ನಡೆದಿರುವ ಈ ಚಿತ್ರದಲ್ಲಿ ಸನ್ನಿ ಮತ್ತು ಕರಿಷ್ಮಾ ತನ್ನಾ, ಟೀನಾ ಮತ್ತು ಲೊಲೊ ಎಂಬ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಈ ಫೋಟೊಗಳು ಸನ್ನಿಯ ಹೊಸ ಪ್ರಾಜೆಕ್ಟ್‌ಗೆ ಸಂಬಂಧಿಸಿದ್ದು ಎಂಬುದು ಬಾಲಿವುಡ್‌ ಗಾಸಿಪ್‌. ಈ ನಡುವೆ ಹಾಲಿವುಡ್‌ನ ಯಾವುದೋ ಸಿನಿಮಾಕ್ಕೆ ಮಾದಕ ನಟಿ ತಯಾರಾಗುತ್ತಿದ್ದಾರೆ ಎಂಬ ಗುಸುಗುಸು ಸಹ ತೇಲಿ ಬರುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.