ADVERTISEMENT

ಆರೋಗ್ಯಕ್ಕೆ ಬೇಕು ನುಗ್ಗೆ...

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಗ್ರಾಫಿಕ್ಸ್ : ಶ್ರೀಕಂಠ ಮೂರ್ತಿ
ಗ್ರಾಫಿಕ್ಸ್ : ಶ್ರೀಕಂಠ ಮೂರ್ತಿ   

ನುಗ್ಗೆ ಕಾಯಿ
*ಜಂತುಹುಳು ಭಾದೆ ನಿವಾರಿಸಬಹುದು.
*ಅಜೀರ್ಣ ನಿವಾರಿಸಬಹುದು.
*ಇದು ಯಕೃತ್ ಮತ್ತು ಗುಲ್ಮ ವ್ಯಾಧಿಗಳಿಗೆ ರಾಮಬಾಣ.
*ಹಲ್ಲು ಮತ್ತು ವಸಡಿಗೆ ಬೇಕಾದ ‘ಸಿ’ ಜೀವಸತ್ವ ಹೇರಳವಾಗಿದೆ.
*ದವಡೆಯಿಂದ ರಕ್ತ ಸೋರುವ ಪಯೋರಿಯಾ ವ್ಯಾಧಿಗೆ ಇದು ಒಳ್ಳೆ ಔಷಧ.

ಸೊಪ್ಪು
*ನುಗ್ಗೆಸೊಪ್ಪು ಲೈಂಗಿಕ ಶಕ್ತಿ ವೃದ್ಧಿಸಲು ಸಹಕಾರಿ. ನುಗ್ಗೆ ಸೊಪ್ಪು ಚಹಾವನ್ನು ಪ್ರತಿದಿನ ಕುಡಿಯುವುದರಿಂದ ಕಳೆದುಹೋದ ಲೈಂಗಿಕ ಶಕ್ತಿಯನ್ನು ಮತ್ತೆ ಪಡೆಯಬಹುದು.
*ನುಗ್ಗೆ ಸೊಪ್ಪಿನ ರಸವನ್ನು ಜೇನು ತುಪ್ಪಕ್ಕೆ ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಅರ್ಧ ಚಮಚ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.
*ನುಗ್ಗೆ ಸೊಪ್ಪನ್ನು ಎದೆಹಾಲಿನಲ್ಲಿ ಅರೆದು ಹಣೆಗೆ ಲೇಪಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ.
*ನುಗ್ಗೆಸೊಪ್ಪು ರಕ್ತ ಶುದ್ಧೀಕರಿಸುವ ಜತೆಗೆ ಮೂಳೆಗಳನ್ನು ಬಲಪಡಿಸುತ್ತದೆ.
*ನುಗ್ಗೆ ಚಕ್ಕೆಯನ್ನು ತೆನೆ ಇಲ್ಲದ ಹಾಲಿನಲ್ಲಿ ತೇಯ್ದು ಮೂರು ದಿನ ಕುಡಿದರೆ ಮಕ್ಕಳಲ್ಲಿ ಕಾಡುವ ಕೆಮ್ಮು ಶಮನಗೊಳ್ಳುವುದು.

ಬೇರು, ತೊಗಟೆ
*ಹೃದಯ ಹಾಗೂ ಅಜೀರ್ಣ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
*ನುಗ್ಗೆ ಮರವನ್ನು ಕೆತ್ತಿದಾಗ ಬರುವ ಅಂಟನ್ನು ಹಾಲಿನಲ್ಲಿ ಬೆರೆಸಿ ಲೇಪಿಸಿದರೆ ತಲೆನೋವಿಗೆ ತಕ್ಷಣ ಪರಿಹಾರ ಕಾಣಬಹುದಾಗಿದೆ.

ADVERTISEMENT

ಬೀಜ
*ಹಾಲಿನಲ್ಲಿ ಬೇಯಿಸಿ ತಿಂದರೆ ವೀರ್ಯವರ್ಧನೆಯಾಗುತ್ತದೆ.
*ನುಗ್ಗೆ ಮರದ ಗೋಂದು ಮತ್ತು ನುಗ್ಗೆ ಬೀಜಗಳನ್ನು ಒಣಗಿಸಿ ಪುಡಿಮಾಡಿ ಪ್ರತಿದಿನ ರಾತ್ರಿ ಹಾಲಿಗೆ ಬೆರೆಸಿ ಕುಡಿಯುವುದರಿಂದ ಧಾತು ಕಟ್ಟಿಕೊಳ್ಳುತ್ತದೆ
*ಉನ್ಮಾದ ತಡೆಗಟ್ಟಲು ಇದು ಉಪಕಾರಿ.

ಬಾಣಂತಿ ಮತ್ತು ಶಿಶುವಿಗೆ
ಬಾಣಂತಿಯರಿಗೆ ಹಾಗೂ ನವಜಾತ ಶಿಶುವಿಗೆ ನುಗ್ಗೆ ಸೊಪ್ಪು ತುಂಬಾ ಒಳ್ಳೆಯದು ಬಾಣಂತಿಯರಿಗೆ ನುಗ್ಗೆಸೊಪ್ಪು ನೀಡುವುದರಿಂದ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ. ದೇಹದಲ್ಲಿ ಖನಿಜಾಂಶ ಹೆಚ್ಚಿ, ತಾಯಿ ತಿಂದ ಆಹಾರ ಮಗುವಿಗೆ ಎದೆ ಹಾಲಿನ ರೂಪದಲ್ಲಿ ಹೋಗುವುದರಿಂದ ನವಜಾತಶಿಶುವಿನ ಮೂಳೆಗಳು ಬಲಿಷ್ಠವಾಗಲು ಅನುಕೂಲವಾಗುತ್ತದೆ.

ನುಗ್ಗೆಸೊಪ್ಪಿನ ಚಹಾ
ನುಗ್ಗೆಸೊಪ್ಪಿನ ಚಹಾವನ್ನು ನಿತ್ಯ ಸೇವಿಸುತ್ತಿದ್ದರೆ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು

ನುಗ್ಗೆ ಸೊಪ್ಪು ಏಕೆ ಭಿನ್ನ?
*ಕಿತ್ತಳೆ ಹಣ್ಣಿಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ
*ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ
*ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಷಿಯಂ
*ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್‌ ಎ
*ಪಾಲಾಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ
*ಬಾದಾಮಿಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ
*ಮೊಟ್ಟೆಯ ಬಿಳಿಯ ಭಾಗಕ್ಕಿಂತ 2 ಪಟ್ಟು ಹೆಚ್ಚು ಪ್ರೊಟೀನ್‌

ಅತಿಯಾದರೆ ಅಪಾಯ!
*ನುಗ್ಗೆಸೊಪ್ಪಿನಲ್ಲಿ ಅಧಿಕ ಔಷಧೀಯ ಗುಣವಿದೆ ಎಂದು ಅದನ್ನು ಮಿತಿಮೀರಿ ಸೇವಿಸದಂತೆ ವೈದ್ಯರು ಎಚ್ಚರಿಸುತ್ತಾರೆ. ಇದು ಅತಿಯಾದ ವಿರೇಚಕ ಗುಣ ಹೊಂದಿರುವ ಕಾರಣ, ಹೊಟ್ಟೆನೋವು, ಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
*ನುಗ್ಗೆಕಾಯಿಯನ್ನು ನೇರವಾಗಿ ತೆಗೆದುಕೊಳ್ಳುವುದು ಕೂಡ ಅಪಾಯಕರ. ಇದು ಎದೆಯುರಿಗೆ ಕಾಣವಾಗಬಲ್ಲುದು.
*ಸಾವಯವದಲ್ಲಿ ಬೆಳೆದ ನುಗ್ಗೆಯಿಂದ ಯಾವುದೇ ಹಾನಿಯಿಲ್ಲ. ಒಂದು ವೇಳೆ ರಾಸಾಯನಿಕ ಸಿಂಪರಣೆ ಮಾಡಿ ಬೆಳೆದ ಗಿಡಗಳ ಬೇರನ್ನು ಸೇವಿಸಿದರೆ ಗರ್ಭಸ್ರಾವ ಆಗುವ ಸಾಧ್ಯತೆ ಇದೆ.

ನುಗ್ಗೆ ರಫ್ತಿನಲ್ಲಿ ವಿಶ್ವದಲ್ಲಿ ಭಾರತಕ್ಕೆ ನಂ.1 ಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.