ADVERTISEMENT

ಇಲ್ಲಿದೆ ನಾಲಿಗೆಯ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2017, 19:30 IST
Last Updated 26 ಮಾರ್ಚ್ 2017, 19:30 IST
ಇಲ್ಲಿದೆ ನಾಲಿಗೆಯ ಚಿತ್ತಾರ
ಇಲ್ಲಿದೆ ನಾಲಿಗೆಯ ಚಿತ್ತಾರ   

ನಾಲಿಗೆ ರುಚಿ ನೋಡುವ ಅಂಗ ಎಂಬುದು ಎಲ್ಲರಿಗೂ ತಿಳಿದಿದೆ. ಅದರಿಂದ ಚಿತ್ರ ಬಿಡಿಸುವುದು ಸಾಧ್ಯವೇ? ನಿಕ್‌ ಸ್ಟೋಬರ್ಲ್‌ ಎಂಬುವವರು ಹೀಗೊಂದು ಪ್ರಯೋಗ ಮಾಡಿ ಯಶಸ್ಸಾಗಿದ್ದಾರೆ.

ಅಮೆರಿಕದ ಇವರ ನಾಲಿಗೆಯ ಉದ್ದ  3.97 ಇಂಚು. ಇವರಿಗೆ ಚಿತ್ರ ಬಿಡಿಸುವುದು ಒಂದು ಹವ್ಯಾಸ. ಆದರೆ ಅಷ್ಟೊಂದು ಸುಂದರವಾಗಿಯೇನೂ ಬಿಡಿಸುವುದು ಅವರಿಂದಾಗುತ್ತಿರಲಿಲ್ಲ. ಹೀಗಾಗಿ ತನಗಿರುವ ಉದ್ದದ ನಾಲಿಗೆಯನ್ನು ಮಾತನಾಡುವುದಕ್ಕಷ್ಟೇ ಅಲ್ಲ, ಚಿತ್ರ ಬಿಡಿಸುವುದಕ್ಕೂ ಬಳಸಿಕೊಂಡಿದ್ದಾರೆ.

ಈ ಮೂಲಕ ವಾದರೂ ಜನಪ್ರಿಯತೆ ಗಳಿಸುವುದು ಇವರ ಉದ್ದೇಶವಾಗಿತ್ತು. ನಾಲಿಗೆಯನ್ನು ಇವರು ಬಣ್ಣಗಳಲ್ಲಿ ಅದ್ದಿ ಅದ್ದಿ ಚಿತ್ರ ಬಿಡಿಸುವ ರೀತಿಯೇ ಸೋಜಿಗ ಮೂಡಿಸುತ್ತದೆ.

‘ನಾಲಿಗೆ ನನಗೆ ದೇವರು ಕೊಟ್ಟ ವರ. ಉದ್ದದ ನಾಲಿಗೆಯಿದೆ ಎಂದು ನನಗೆ ಬೇಸರವಾಗಿಲ್ಲ. ಈ ಸಾಧನೆಗೆ ಪ್ರೇರಣೆ ಕಲಾವಿದ ಆ್ಯಂಡಿ ವಾರ್‌ಹೊಲ್’ ಎಂದಿದ್ದಾರೆ. ಇವರ ಈ ಸಾಧನೆಗೆ ಗಿನ್ನಿಸ್‌ ಮನ್ನಣೆಯೂ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.