ADVERTISEMENT

ಉಸಿರಾಡುವ ವಿಧಾನ ಬಲ್ಲಿರಾ?

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST
ಉಸಿರಾಡುವ ವಿಧಾನ ಬಲ್ಲಿರಾ?
ಉಸಿರಾಡುವ ವಿಧಾನ ಬಲ್ಲಿರಾ?   

ಒತ್ತಡ ಮತ್ತು ಉದ್ವೇಗ: ಲಯಬದ್ಧವಾಗಿ ಉಸಿರಾಡುವುದರಿಂದ ಒತ್ತಡ ಹಾಗೂ ಉದ್ವೇಗದಿಂದ ವಿರಾಮ ಪಡೆಯಬಹುದು. ನೇರವಾಗಿ ಮೇಲ್ಮುಖವಾಗಿ ಮಲಗಿ ಮಂಡಿ ಕೆಳಗೆ ದಿಂಬನ್ನು ಇಟ್ಟುಕೊಳ್ಳಿ. ಒಂದು ಕೈಯನ್ನು ಎದೆಯ ಮೇಲೆ, ಮತ್ತೊಂದು ಕೈಯನ್ನು ಹೊಟ್ಟೆ ಮೇಲೆ ಇಟ್ಟುಕೊಳ್ಳಿ. ನಿಧಾನವಾಗಿ ಉಸಿರಾಡಿ.

ಶಕ್ತಿ ತುಂಬಲು: ಈ ವಿಧಾನದ ಉಸಿರಾಟ ಮನಸ್ಸಿಗೆ ಶಕ್ತಿ ತುಂಬುತ್ತದೆ. ಮೂಗಿನ ಒಂದು ಹೊಳ್ಳೆಯನ್ನು ಮುಚ್ಚಿ ಹಿಡಿದು, ಮತ್ತೊಂದು ಹೊಳ್ಳೆಯಿಂದ ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳಬೇಕು. ಈ ಉಸಿರನ್ನು ಹೊಟ್ಟೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೊತ್ತು ಹಿಡಿದಿಟ್ಟುಕೊಳ್ಳಬೇಕು. ನಂತರ ಮತ್ತೊಂದು ಹೊಳ್ಳೆಯ ಮೂಲಕ ಉಸಿರು ಬಿಡಬೇಕು. ಹೀಗೆ ಪ್ರತಿದಿನ ಹತ್ತು ಬಾರಿ ಮಾಡುವುದು ಒಳ್ಳೆಯದು.

ದೇಹ ಬಲಪಡಿಸಲು: ಬಾಯಿಯಿಂದ ದೀರ್ಘವಾಗಿ ಉಸಿರಾಡುವುದರಿಂದ ದೇಹದ ಸ್ನಾಯುಗಳು ಬಲಗೊಳ್ಳುತ್ತವೆ. ಗಂಟಲ ಮೂಲಕ ಉಸಿರನ್ನು ನಿಯಂತ್ರಣ ಮಾಡುತ್ತಾ ಉಸಿರನ್ನು ಎಳೆದುಕೊಂಡು, ಹೊರಬಿಡಿ. ಈ ಉಸಿರಾಟದ ವ್ಯಾಯಾಮವನ್ನು ಕೂತು ಇಲ್ಲವೇ ಮಲಗಿಯೂ ಮಾಡಬಹುದು.

ADVERTISEMENT

ದೇಹದ ನೋವು ನಿವಾರಣೆ: ಮಲಗಿ, ಒಂದು ಕೈಯನ್ನು ಹೊಟ್ಟೆಯ ಮೇಲೆ ಇರಿಸಿ. ಮತ್ತೊಂದು ಕೈಯನ್ನು ನೆಲದ ಮೇಲೆ ಇರಿಸಿ. ನಿಧಾನವಾಗಿ ಉಸಿರಾಡಿ. ಕನಿಷ್ಠ ಐದು ಸೆಕೆಂಡ್ ಉಸಿರನ್ನು ಎಳೆದುಕೊಳ್ಳಿ. ಮತ್ತೊಂದು ಐದು ಸೆಕೆಂಡ್ ಉಸಿರನ್ನು ಬಿಡಿ. ಹೀಗೆ ನಿಧಾನವಾಗಿ ಉಸಿರಾಡುವುದರಿಂದ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ನೋವು ಕಡಿಮೆಯಗುತ್ತದೆ.

ಅಸ್ತಮಾ: ಹಿಡಿದು ಬಿಡುವ ಉಸಿರಾಟದ ವ್ಯಾಯಾಮ ಮಾಡುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ. ಒಮ್ಮೆ ಉಸಿರನ್ನು ದೀರ್ಘವಾಗಿ ಎಳೆದುಕೊಂಡು ಐದು ಸೆಕೆಂಡ್‌ ಮೂಗು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳಿ ನಂತರ ಮೂಗಿನಿಂದ ಉಸಿರನ್ನು ಬಿಡಿ. ಹೀಗೆ ಉಸಿರನ್ನು ಹಿಡಿದು ಬಿಡುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.