ADVERTISEMENT

ಕಂದನಿಗೆ ಬೇಡ ಚಳಿಗಾಳಿಯ ಕಿರಿಕಿರಿ

ಆರೋಗ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2016, 19:30 IST
Last Updated 18 ಡಿಸೆಂಬರ್ 2016, 19:30 IST
ಕಂದನಿಗೆ ಬೇಡ ಚಳಿಗಾಳಿಯ ಕಿರಿಕಿರಿ
ಕಂದನಿಗೆ ಬೇಡ ಚಳಿಗಾಳಿಯ ಕಿರಿಕಿರಿ   

ಪುಟ್ಟ ಮಕ್ಕಳ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಚಳಿಗಾಲದಲ್ಲಿ ಹಿರಿಯರಿಗಿಂತ ಐದು ಪಟ್ಟು ಹೆಚ್ಚು ತೇವಾಂಶವನ್ನು ಮಕ್ಕಳ ಚರ್ಮ ಕಳೆದುಕೊಳ್ಳುತ್ತದೆ. ಹೀಗಾಗಿ ಚರ್ಮ ಒಣಗುವುದಲ್ಲದೆ ಒಡೆಯುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ  ಚರ್ಮ ಒಣಗದಂತೆ ಕಾಪಾಡುವುದು ಬಹಳ ಮುಖ್ಯ. ಇದಕ್ಕಾಗಿ ಮಕ್ಕಳ ತಜ್ಞ ಉದಯ್‌ ಅನಂತ್‌ ಪೈ ಅವರು  ಕೆಲವು ಉಪಾಯಗಳನ್ನು ತಿಳಿಸಿದ್ದಾರೆ.

* ಚಳಿಗಾಲದಲ್ಲಿ ಹೆಚ್ಚು  ಹೊತ್ತು ಸ್ನಾನ ಮಾಡಿಸಬಾರದು. ಕೊಳೆಯ ಜೊತೆ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯಂಶ  ತೊಳೆದು ಹೋಗುತ್ತದೆ. ಹೀಗಾಗಿ  ಕಡಿಮೆ ಸಮಯದಲ್ಲಿ ಸ್ನಾನ ಮಾಡಿಸುವುದು ಉತ್ತಮ.

* ಸ್ನಾನದ ನೀರು ಬೆಚ್ಚಗಿದ್ದರೆ ಸಾಕು.

* ನಿತ್ಯ ಬಳಸುವ ಸಾಬೂನಿಗಿಂತ ಕಡಿಮೆ ರಾಸಾಯನಿಕ ಇರುವ ನೈಸರ್ಗಿಕ ಸಾಬೂನು ಬಳಸಿ.

* ಸಿಹಿ ನೀರಿನ ವಲಯದಲ್ಲಿರುವವರು ಬರೇ ನೀರಿನಿಂದ ಮಕ್ಕಳ ಮೈ ತೊಳೆದರೂ ಸಾಕು. ಗಡಸು ನೀರಿನ ಸ್ನಾನ ಚರ್ಮದ ತೇವಾಂಶವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ.

* ಚರ್ಮದಲ್ಲಿ ತೇವಾಂಶ ಕಾಪಾಡಲು ಮಾಯಿಶ್ಚರೈಸರ್‌ ಬಳಸುವುದು ಉತ್ತಮ. ಇದರಿಂದ ಚಳಿಗಾಳಿಯಿಂದ ಚರ್ಮ ಕೆಂಪಾಗುವುದು, ತುರಿಕೆ ಉಂಟಾಗುವುದನ್ನು  ತಪ್ಪಿಸಬಹುದು.

* ಹೀಟರ್‌ಗಳನ್ನು ಬಳಸುವುದರಿಂದಲೂ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಇದಕ್ಕಾಗಿ ಬೇಬಿ ಲೋಷನ್‌ ಬಳಸಬಹುದು.

* ಚಳಿಗಾಲದಲ್ಲಿ ಮಕ್ಕಳ ಮೈಗೆ ನೇರವಾಗಿ ಉಣ್ಣೆಯ ಬಟ್ಟೆ ತೊಡಿಸಿದರೆ ಮಕ್ಕಳಿಗೆ ಕಿರಿಕಿರಿಯಾಗುತ್ತದೆ.  ಸಿಂಥೆಟಿಕ್‌ ಬಟ್ಟೆಗಳನ್ನು ಬಿಟ್ಟು ಬೇರೆ ಯಾವುದೇ ಫ್ಯಾಬ್ರಿಕ್‌ನ ಉಡುಗೆ ತೊಡಿಸಿ ಅದರ ಮೇಲೆ ಉಣ್ಣೆಯ ಅಂಗಿ, ಟೋಪಿ ಹಾಕಿ.

* ಬೆಚ್ಚಗಿನ ನೀರು ಕುಡಿಸುವುದರಿಂದಲೂ ಚರ್ಮದ ತೇವಾಂಶ ಕಾಪಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.