ADVERTISEMENT

ಚೀನಾ: 2050ಕ್ಕೆ 3 ಕೋಟಿ ಪುರುಷರು ಏಕಾಂಗಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಚೀನಾ: 2050ಕ್ಕೆ 3 ಕೋಟಿ ಪುರುಷರು ಏಕಾಂಗಿ
ಚೀನಾ: 2050ಕ್ಕೆ 3 ಕೋಟಿ ಪುರುಷರು ಏಕಾಂಗಿ   

ಪ್ರತಿ ಮನಸು ಸಂಗಾತಿಯನ್ನು ಬಯಸುತ್ತದೆ. ಆದರೆ ಚೀನಾದ ಈಗಿನ ಪರಿಸ್ಥಿತಿಯ ಅನ್ವಯ 2050ರ ವೇಳೆಗೆ 3 ಕೋಟಿ ಪುರುಷರು ಏಕಾಂಗಿಯಾಗಿ ಜೀವನ ಸವೆಸಬೇಕಾದ ಪರಿಸ್ಥಿತಿ ಒದಗಿಬರಲಿದೆ.

ಚೀನಿ ಪುರುಷರು ಒಂದೋ ಬೇರೆ ದೇಶದ ಹುಡುಗಿಯನ್ನು ಮದುವೆ ಆಗಬೇಕು ಇಲ್ಲವೇ ಏಕಾಂಗಿಯಾಗಿ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈಗಾಗಲೇ ಅಲ್ಲಿ ಲಿಂಗಾನುಪಾತ ಕುಸಿದಿದೆ.

ಚೈನೀಸ್‌ ಅಕಾಡೆಮಿ ಆಫ್‌ ಸೋಶಿಯಲ್‌ ಸೈನ್ಸ್‌ನ ಸಂಶೋಧಕ ವಾಂಗ್‌ ಗಾಂಗ್ಸ್‌ಜು ಈ ಮಹತ್ವದ ಅಂಕಿಅಂಶಗಳನ್ನು ಪ್ರಕಟಿಸಿದ್ದಾರೆ. 2020ರ ವೇಳೆಗೆ ಚೀನಾದಲ್ಲಿ ಮದುವೆ ಆಗದೆ ಉಳಿಯುವ 35ರಿಂದ 59 ವರ್ಷದ ಪುರುಷರ ಸಂಖ್ಯೆ 1.5 ಕೋಟಿ ಆಗಲಿದೆ. ಈ ಸಂಖ್ಯೆ 2050ರ ಸುಮಾರಿಗೆ 3 ಕೋಟಿ ಮುಟ್ಟಲಿದೆ ಎಂಬುದು ಅವರು ಕಂಡುಕೊಂಡ ಸತ್ಯ.
(ಮಾಹಿತಿ: ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.