ADVERTISEMENT

ಚೆಲುವಿನ ಸಾರಥಿಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 19:30 IST
Last Updated 4 ಸೆಪ್ಟೆಂಬರ್ 2017, 19:30 IST
ಚೆಲುವಿನ ಸಾರಥಿಗಳು
ಚೆಲುವಿನ ಸಾರಥಿಗಳು   

ಅಕ್ಷಯ್ ತ್ಯಾಗಿ

ಅರ್ಜುನ್ ಕಪೂರ್‌, ಇರ್ಫಾನ್ ಖಾನ್, ಮಹೇಶ್ ಬಾಬು, ಸಿದ್ಧಾರ್ಥ್ ಮಲ್ಹೋತ್ರ, ವರುಣ್ ಧವನ್ ಅವರಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ ಅಕ್ಷಯ್‌ ತ್ಯಾಗಿ. ಕೆನಾಡದಲ್ಲಿ ವಸ್ತ್ರ ವಿನ್ಯಾಸ ತರಬೇತಿ ಪಡೆದಿರುವ ತ್ಯಾಗಿ ‘ನನಗೆ ಹತ್ತು ವರ್ಷವಿದ್ದಾಗ ಮಹಿಳೆಯರ ಧಿರಿಸನ್ನು ವಿನ್ಯಾಶ ಮಾಡುತ್ತಿದೆ. ಈ ಆಸಕ್ತಿ ಮುಂದುವರೆದು ಈಗ ಪೂರ್ಣಪ್ರಮಾಣದಲ್ಲಿ ವಸ್ತ್ರವಿನ್ಯಾಸಕನಾಗಿದ್ದೇನೆ. ನನಗೂ ಗೊತ್ತಿಲ್ಲ ಈ ಕ್ಷೇತ್ರಕ್ಕೆ ಹೇಗೆ ಬಂದೆ ಎಂದು’ ಎನ್ನುತ್ತಾರೆ. ಕೆನಾಡದಿಂದ 2011ರಲ್ಲಿ ಮುಂಬೈಗೆ ಬಂದಾಗ ತ್ಯಾಗಿ ಅವರಿಗೆ ಕೆಲಸ ಹುಡುಕುವುದೇ ಕಷ್ಟವಾಗಿತ್ತಂತೆ. ಅನಿತಾ ಶ್ರಾಫ್ ಅಡಾಜಾನಿಯ ಅವರ ‘ಸೈಲ್‌ ಸೆಲ್’ ಸಂಸ್ಥೆ ಸೇರಿದರು. ಅಲ್ಲಿರುವಾಗ ‘ಕ್ರಿಶ್–3’ ಸಿನಿಮಾಗಾಗಿ ಹೃತಿಕ್‌ ರೋಷನ್ ಅವರ ಸ್ಟೈಲಿಸ್ಟ್‌ ಆದರು ನಂತರ ‘ಬ್ಯಾಂಗ್‌ ಬ್ಯಾಂಗ್’ ಸಿನಿಮಾದಲ್ಲಿ ತೊಡಗಿಕೊಂಡು ಈ ಎರಡು ಸಿನಿಮಾದಿಂದ ಸಿಕ್ಕ ಯಶಸ್ಸು ಇಂದು ತ್ಯಾಗಿ ಅವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.

ಅರ್ಜುನ್ ಕಪೂರ್ ಅವರಿಗೆ ವಸ್ತ್ರ ವಿನ್ಯಾಸ ಮಾಡುವುದು ಸವಾಲಿನ ಕೆಲಸವಂತೆ. ಏಕೆಂದರೆ ಅವರ ಸುತ್ತಳತೆ ಒಂದೇ ಸಮಾನಾಗಿ ಇಲ್ಲ. ಬದಲಾಗುತ್ತಿರುತ್ತದೆ. ಪ್ರತಿ ಬಾರಿ ಏನಾದರೂ ಹೆಚ್ಚು ಕಮ್ಮಿಯಾಗುತ್ತಿರುತ್ತದೆ. ಆದರೂ ಅದೆಲ್ಲವನ್ನೂ ಮೀರಿ ಚೆಂದ ಕಾಣಿಸಲು ಯತ್ನಿಸುತ್ತಾನೆ. ಇನ್ನು ತ್ಯಾಗಿ ಅವರಿಗೆ ಬಾಲಿವುಡ್‌ನಲ್ಲಿ ರಾಹುಲ್ ಖನ್ನಾ ಮಾಡಿಕೊಳ್ಳುವ ಸ್ಟೈಲ್ ತುಂಬಾ ಇಷ್ಟ.

ADVERTISEMENT

‘ಬ್ಯಾಂಗ್ ಬ್ಯಾಂಗ್’ ಟ್ರೇಲರ್‌ಗಾಗಿ ಮಾಡಿದ ವಿನ್ಯಾಸ ಹಾಸ್ಯಕ್ಕೆ ಗುರಿಯಾಗಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ತ್ಯಾಗಿ. ಭಾರತೀಯ ಯಾವ ವಿನ್ಯಾಸಗಾರಾದ ಶಂತನು, ನಿಖಿಲ್ ಹಾಗೂ ಸಾಹಿಲ್ ಅನೇಜಾ ಅವರಿಂದ ತ್ಯಾಗಿ ಸ್ಫೂರ್ತಿ ಪಡೆಯುತ್ತಾರಂತೆ.

‘ಇಟಲಿಯಲ್ಲಿ ನಡೆದ ‘ಇನ್ಫರ್ನೊ’ ಸಿನಿಮಾ ಪ್ರಚಾರಕ್ಕಾಗಿ ಇರ್ಫಾನ್ ಖಾನ್ ಅವರಿಗೆ ನಾನು ಮಾಡಿದ ಸ್ಟೈಲ್. ಅದು ಅವರ ವ್ಯಕ್ತಿತ್ವವನ್ನೇ ಬದಲಿಸಿತ್ತು. ಡಿಯೊರ್ ಸೂಟ್ ಹಾಗೂ ಲೌಬೌಟಿನ್ ಶೂಗಳು ಅವರಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿತ್ತು’ ಎಂದು ತಮ್ಮ ವೃತ್ತಿ ಜೀವನದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ ತ್ಯಾಗಿ.

ಅಮೀರ್ ಖಾನ್ ಅವರು ಸ್ಟೈಲಿಂಗ್ ವಿಚಾರದಲ್ಲಿ ಸ್ವಲ್ಪ ಮೇಕ್‌ ಓವರ್ ಬೇಕು ಎನ್ನುವುದು ತ್ಯಾಗಿ ಅಭಿಪ್ರಾಯ. ಹಾಗೇ ತ್ಯಾಗಿ ಅವರಿಗೆ ಅಮಿತಾಭ್‌ ಬಚ್ಚನ್ ಅವರ ಸ್ಟೈಲಿಸ್ಟ್‌ ಆಗುವ ಆಸೆಯೂ ಇದೆ. ಹುಸೇನ್ ಚಲಾಯನ್, ಕಾಮೆ ಡೆಸ್ ಗಾರ್ಕಾನ್ಸ್ ಮತ್ತು ಇಸ್ಸೆ ಮಿಯಕೆ ಅವರಿಂದ ತ್ಯಾಗಿ ಸ್ಫೂರ್ತಿ ಪಡೆದಿದ್ದಾರೆ.

ನಿಮಗೆ ಈ ವರೆಗೆ ಬಂದಿರುವ ವಿಲಕ್ಷಣವಾದ ವಿನಂತಿ ಬಗ್ಗೆ ಕೇಳಿದ್ದರೆ ‘ಸೆಲೆಬ್ರಿಟಿಯೊಬ್ಬರು ಒಳ ಉಡುಪು ಖರೀದಿಸಿಕೊಡಲು ಕೇಳಿಕೊಂಡಿದ್ದರು’ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ ತ್ಯಾಗಿ.

**

ಕಾಜಿಮ್ ಮತ್ತು ಪ್ರಿಯಾಂಕಾ

ಅದಿತ್ಯ ರಾಯ್ ಕಪೂರ್, ಇಮ್ರಾನ್ ಖಾನ್, ರಣಬೀರ್ ಕಪೂರ್, ಸುಶಾಂತ್ ಸಿಂಗ್ ರಜಪೂತ್, ಟೈಗರ್ ಶ್ರಾಫ್ ಅವರಿಗೆ ವಸ್ತ್ರ ವಿನ್ಯಾಸ ಮಾಡುವುದು ಕಾಜಿಮ್ ಮತ್ತು ಪ್ರಿಯಾಂಕಾ ದಂಪತಿ. ‘ಫ್ಯಾಷನ್ ಎನ್ನನುವುದು ಗೀಳು, ಪ್ರತಿದಿನ ನಾವು ಫ್ಯಾಷನ್ ಬಗ್ಗೆಯೇ ಚರ್ಚಿಸುತ್ತಿರುತ್ತೇವೆ. ಆದರೆ ನಾವ್ಯಾರು ಕಟ್ಟುನಿಟ್ಟಾಗಿ ಇಂಥದ್ದೇ ಫ್ಯಾಷನ್ ಅನುಸರಿಸಬೇಕು ಎಂದುಕೊಳ್ಳುವುದಿಲ್ಲ’ ಎನ್ನುವುದು ಈ ದಂಪತಿ ಅಭಿಪ್ರಾಯ. ಇವರು ‘ವೈಂಗ್ಲೋರಿಯಸ್’ ಎಂಬ ಹೆಸರಿನಡಿ ಈ ದಂಪತಿ ವಸ್ತ್ರವಿನ್ಯಾಸ ಮಾಡುತ್ತಾರೆ.

ಇವರಿಗೆ ಇಮ್ರಾನ್ ಖಾನ್ ಅವರಿಗೆ ವಸ್ತವಿನ್ಯಾಸ ಮಾಡುವುದು ಸವಾಲಿನ ಕೆಲಸವಂತೆ. ‘ಬಟ್ಟೆಯ ಪ್ರತಿ ಹೊಲಿಗೆ, ಗುಂಡಿ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಾರೆ. ಕ್ಯಾಶುಲ್ ವಿನ್ಯಾಸವಾದರೂ ಅವರಿಗೆ ಉತ್ತಮ ಗುಣಮಟ್ಟವೇ ಬೇಕು. ಅವರ ಪತ್ನಿ ಅವಂತಿಕಾ ಕೂಡ ಹೀಗೆಯೇ. ನಮಗೆ ಫ್ಯಾಷನ್ ಸೆನ್ಸ್‌ ಇಷ್ಟವಾಗುತ್ತದೆ’ ಎನ್ನುತ್ತಾರೆ. ಈ ದಂಪತಿಯ ಪ್ರಕಾರ ರಣಬೀರ್ ಕಪೂರ್ ಮತ್ತು ಇಮ್ರಾನ್ ಖಾನ್ ಚೆಂದವಾಗಿ ಸ್ಟೈಲ್ ಮಾಡುತ್ತಾರೆ.

‘ದುಬೈನಲ್ಲಿ ಒಂದು ಕಾರ್ಯಕ್ರಮಕ್ಕಾಗಿ ತಮ್ಮ ಗೆಳೆಯರೊಬ್ಬರಿಗೆ ತುಂಬಾ ಅವಸರದಲ್ಲಿ ಸೂಟ್‌ ಹೊಲೆದುಕೊಟ್ಟಿದ್ದೆವು. ಆದರೆ ಪ್ಯಾಂಟ್ ಹೊಲಿಕೆ ಬಿಚ್ಚಿಕೊಂಡಿತ್ತು. ಆದರೆ ನಂತರ ಬೇರೆ ಪ್ಯಾಂಟ್‌ ಕೊಟ್ಟೆವು’ ಎಂದು ವೃತ್ತಿ ಜೀವನದ ತರಲೆಗಳನ್ನು ನೆನಪಿಸಿಕೊಳ್ಳುತ್ತಾರೆ ಪ್ರಿಯಾಂಕಾ ಮತ್ತು ಕಾಜಿಮ್.

ಭಾರತೀಯ ಯಾವ ವಿನ್ಯಾಸಗಾರ ನಿಮಗೆ ಇಷ್ಟ ಎಂದರೆ ಅಂಟಾರ್-ಅಗ್ನಿ ಎನ್ನುತ್ತಾರೆ ಈ ದಂಪತಿ. ಹಾಗೇ ಇವರಿಗೆ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕಾಗಿ ರಣಬೀರ್ ಕಪೂರ್‌ ಅವರಿಗೆ ಮಾಡಿದ್ದ ಸ್ಟೈಲ್ ತೃಪ್ತಿ ನೀಡಿತಂತೆ. ‘ಆಯುಷ್ಮಾನ್ ಖುರ್ರಾನಾ ಅವರು ಬಣ್ಣಗಳೊಂದಿಗೆ ಇನ್ನಷ್ಟು ಪ್ರಯೋಗ ಮಾಡಬೇಕು. ಅವರಿಗೆ ಮೇಕ್‌ಓವರ್ ಅವಶ್ಯಕತೆ ಇದೆ’ ಎನ್ನುತ್ತಾರೆ ಪ್ರಿಯಾ.

ಈ ದಂಪತಿಗೆ ವಿರಾಟ್‌ ಕೊಹ್ಲಿ ಇಷ್ಟವಂತೆ ಅವರಿಗೆ ಫಾರ್ಮಲ್‌ ಲುಕ್‌ನ ಹಲವು ದಿರಿಸನ್ನು ವಿನ್ಯಾಸ ಮಾಡಬೇಕು ಎಂಬ ಆಸೆ ಇವರಿಗಿದೆ. ‘ಸೆಲೆಬ್ರಿಟಿಯೊಬ್ಬ ಜಿಮ್‌ ದಿರಿಸುಗಳನ್ನು ವಿನ್ಯಾಸ ಮಾಡವ ಮೊದಲು ತಮ್ಮೊಂದಿಗೆ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡಲು ಹೇಳಿದ್ದರು. ನಮಗೆ ಸಾಕಾಗಿ ಹೋಗಿತ್ತು’ ನಿಮಗೆ ಈ ವರೆಗೆ ಬಂದಿರುವ ವಿಲಕ್ಷಣವಾದ ವಿನಂತಿಯೆಂದರೆ ಇದೇ ಎನ್ನುತ್ತಾರೆ.

**

ಆಸ್ತಾ ಶರ್ಮಾ

ಐಶ್ವರ್ಯಾ ರೈ ಬಚ್ಚನ್, ಇಶಾ ಗುಪ್ತಾ, ಹುಮಾ ಖುರೇಷಿ, ಪೂಜಾ ಹೆಗ್ಡೆ, ಸೈಫ್ ಅಲಿ ಖಾನ್, ಸೋನಾಕ್ಷಿ ಸಿನ್ಹಾ ಅವರಿಗೆ ವಿನ್ಯಾಸ ಮಾಡುವ ಆಸ್ತಾ ಅವರಿಗೆ ಮಹಿಳೆಯರ ದಿರಿಸನ್ನು ವಿನ್ಯಾಸ ಮಾಡುವುದು ಖುಷಿಯ ವಿಚಾರವಂತೆ. ಮಾರ್ಕೆಟಿಂಗ್‌ ವಿದ್ಯಾರ್ಥಿಯಾದ ಆಸ್ತಾ ಅರ್ಧಕ್ಕೆ ಓದುವುದನ್ನು ಬಿಟ್ಟು ವಸ್ತ್ರವಿನ್ಯಾಸ ತರಗತಿಗೆ ಸೇರಿದರು. ‘v' ವಾಹಿನಿಯಲ್ಲಿ ಸ್ವಲ್ಪ ದಿನ ಕೆಲಸ ಮಾಡಿ ತಮ್ಮ ಫ್ಯಾಷನ್ ಪ್ರಜ್ಞೆ ಹೆಚ್ಚಿಸಿಕೊಂಡರು. ಹಾರ್ಪರ್ಸ್ ಬಜಾರ್‌ನಲ್ಲಿ ಕೆಲಸ ಮಾಡಿ ನಂತರ ತಮ್ಮದೇ ಸ್ವಂತ ಫ್ಯಾಷನ್ ಕಂಪೆನಿ ಆರಂಭಿಸಿದರು.

‘ಪ್ರತಿಯೊಬ್ಬ ನಟ ಕೂಡ ತನ್ನದೇ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಹಾಗೇ ಅವನಿಗೆ ತನ್ನದೇ ಫ್ಯಾಷನ್ ಸೆನ್ಸ್‌ ಇರುತ್ತದೆ. ಇದನ್ನು ಅರಿತು ಅವರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಬೇಕು’ ಎನ್ನುವುದು ಆಸ್ತಾ ಅಭಿಪ್ರಾಯ.

ಐಶ್ವರ್ಯ ರೈ ಬಚ್ಚನ್ ಅವರಿಗೆ ವಸ್ತ್ರ ವಿನ್ಯಾಸ ಮಾಡುವುದು ಆಸ್ತಾಗೆ ಸವಾಲಿನ ಕೆಲಸವಂತೆ. ಅವರದ್ದು ಸಂಸ್ಕರಿಸಿದ ವ್ಯಕ್ತಿತ್ವ ಎಲ್ಲವನ್ನೂ ತೀರಾ ಸೂಕ್ಷ್ಮವಾಗಿ ನೋಡುತ್ತಾರೆ ಎನ್ನುತ್ತಾರೆ ಆಸ್ತಾ. ಹಾಗೇ ಆಸ್ತಾಗೆ ಪ್ರಯೋಗಶೀಲರಾದ ಸೋನಂ ಕಪೂರ್‌ ಮತ್ತು ಕಂಗನಾ ರನೌಟ್‌ ಅವರ ಫ್ಯಾಷನ್‌ ಪ್ರಜ್ಞೆ ಇಷ್ಟವಾಗುತ್ತದೆಯಂತೆ.

ಒಮ್ಮ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ಹೆಚ್ಚು ಗುಂಡಿ (ಬಟನ್) ಇರುವ ಬಟ್ಟೆಯನ್ನು ವಿನ್ಯಾಸ ಮಾಡಿದ್ದರಂತೆ ಆದರೆ ಜಾಕ್ವೆಲಿನ್ ಧರಿಸಿದ ಮೇಲೆ ಗುಂಡಿಗಳು ಒಂದೊಂದೆ ಬಿಚ್ಚಿಕೊಳ್ಳಲು ಆರಂಭಿಸಿವೆ. ನಂತರ ಹತ್ತಿರದಲ್ಲಿ ಇದ್ದ ಸೋನಂ ಸಹಾಯ ಮಾಡಿದ್ದರಂತೆ ಹೀಗೆ ತಮ್ಮಕಷ್ಟದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ ಆಸ್ತಾ.

ಕಾನ್‌ ಸಿನಿಮೋತ್ಸವದಲ್ಲಿ ಐಶ್ವರ್ಯ ರೈ ಅವರಿಗೆ ವಸ್ತ್ರ ವಿನ್ಯಾಸ ಮಾಡಿದ್ದು ಆಸ್ತಾ ಅವರ ವೃತ್ತಿ ಜೀವನದ ಹೆಮ್ಮೆ ಕ್ಷಣ. ಹಾಗೇ ಆಸ್ತಾ ವಿದ್ಯಾ ಬಾಲನ್ ಅವರು ವಸ್ತ್ರ ವಿನ್ಯಾಸದಲ್ಲಿ ಹೆಚ್ಚು ಪ್ರಯೋಗ ಮಾಡಬೇಕು ಎನ್ನುತ್ತಾರೆ. ಸಾಧ್ಯವಾದರೆ ಆಲಿಯಾ ಭಟ್‌ ಅವರ ಸ್ಟೈಲಿಸ್ಟ್‌ ಆಗಬೇಕು ಎನ್ನುವುದು ಆಸ್ತಾ ಆಸೆ.

ಜೆನ್ನಿಫರ್ ಲೋಪೆಜ್, ರಿಹಾನ್ನಾ ಮತ್ತು ಜೂಲಿಯಾ ರಾಬರ್ಟ್ಸ್ ಅವರ ವಿನ್ಯಾಸ ಆಸ್ತಾ ಅವರಿಗೆ ಸ್ಫೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.