ADVERTISEMENT

ಜಾಕ್ ಲಂಡನ್ ಕಥೆಗಳು

e–ಪುಸ್ತಕ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST
ಜಾಕ್ ಲಂಡನ್ ಕಥೆಗಳು
ಜಾಕ್ ಲಂಡನ್ ಕಥೆಗಳು   

ಸಾಹಿತ್ಯವನ್ನೇ ಬಳಸಿಕೊಂಡು ಶ್ರೀಮಂತನಾದ ಮೊದಲ ಸಾಹಿತಿ ಎಂಬ ಹೆಗ್ಗಳಿಕೆ ಅಮೆರಿಕದ ಸಾಹಿತಿ ಜಾಕ್ ಲಂಡನ್‌ಗೆ ಇದೆ. ಮುಂದೆ ವಿಶ್ವವ್ಯಾಪಿಯಾದ ಧಾರಾವಾಹಿಗಳು ಮತ್ತು ಪತ್ರಿಕೆಗಳ ಸಣ್ಣ ಕಥೆಗಳನ್ನು ಪ್ರಕಟಿಸುವುದಕ್ಕೆ ಬೇಕಿರುವ ಸಾಂಸ್ಕೃತಿಕ ವಾತಾವರಣವೊಂದು ಮೊದಲು ಸೃಷ್ಟಿಯಾದದ್ದು ಅಮೆರಿಕ ನಿಯತಕಾಲಿಕೆಗಳಲ್ಲಿ. ಇದನ್ನು ಬಹಳ ಚೆನ್ನಾಗಿ ಬಳಸಿಕೊಂಡ ಮೊದಲ ಸಾಹಿತಿ ಜಾಕ್ ಲಂಡನ್. 

ಈ ಕಾರಣದಿಂದಾಗಿಯೇ ಈತ ವಿಶ್ವಪ್ರಸಿದ್ಧನೂ ಆದ. ಐವತ್ತರ ದಶಕದ ಕನ್ನಡ ಸಾಹಿತ್ಯಲೋಕ ಈ ಬಗೆಯ ಬೆಳವಣಿಗೆಗಳನ್ನು ಬೆರಗಿನಿಂದ ನೋಡುತ್ತಿತ್ತಷ್ಟೇ ಅಲ್ಲದೆ ಅದನ್ನು ಕನ್ನಡದಲ್ಲೂ ತರುವುದಕ್ಕೆ ಪ್ರಯತ್ನಿಸುತ್ತಿತ್ತು. ಈ ಅವಧಿಯಲ್ಲಿ ಕನ್ನಡಕ್ಕೆ ಬಂದ ಅನುವಾದಗಳು ಮತ್ತು ಹೊಸ ಕೃತಿಗಳೆಲ್ಲವೂ ಬೇರೆ ಬೇರೆ ರೀತಿಯಲ್ಲಿ ಭಾಷೆಯನ್ನು ಕಟ್ಟುವ ಪ್ರಯತ್ನಗಳೇ ಆಗಿದ್ದವು.

ಜಾಕ್ ಲಂಡನ್‌ನ ಅತ್ಯುತ್ತಮ ಕಥೆಗಳನ್ನು ಆರಿಸಿ ಅನುವಾದಿಸುವ ಕೆಲಸವನ್ನು ಆ ಕಾಲದಲ್ಲಿಯೇ ಡಿ.ವಿ. ರಾಘವೇಂದ್ರ ಅವರು ಮಾಡಿದ್ದರು. ಮೈಸೂರಿನಲ್ಲಿರುವ ಕೃಷ್ಣಮೂರ್ತಿ ಪುರಂನಲ್ಲಿರುವ ಭಾರತಿ ಪ್ರಕಾಶನ 1957ರಲ್ಲಿಯೇ ಪ್ರಕಟಿಸಿತ್ತು.

ಜಾಕ್ ಲಂಡನ್‌ನ ಎಂಟು ಕಥೆಗಳನ್ನು ರಾಘವೇಂದ್ರ ಅನುವಾದಿಸಿದ್ದಾರೆ. ಸುಮಾರು 200 ಪುಟಗಳ ಈ ಪುಸ್ತಕದ ಬೆಲೆ 1.50 ರೂಪಾಯಿಗಳಾಗಿತ್ತು. ಈ ಪುಸ್ತಕ ಈಗ ಆರ್ಕೈವ್ ತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಆಸಕ್ತರು ಇಲ್ಲಿರುವ ಲಿಂಕ್ ಬಳಸಿ ಪುಸ್ತಕವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು: http://bit.ly/2itGTAk

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.