ADVERTISEMENT

ತಡರಾತ್ರಿಯ ಶಾಪಿಂಗ್‌ ಉತ್ಸವ ಬಲು ಜೋರು

​ಪ್ರಜಾವಾಣಿ ವಾರ್ತೆ
Published 29 ಜೂನ್ 2014, 19:30 IST
Last Updated 29 ಜೂನ್ 2014, 19:30 IST
ತಡರಾತ್ರಿಯ ಶಾಪಿಂಗ್‌ ಉತ್ಸವ ಬಲು ಜೋರು
ತಡರಾತ್ರಿಯ ಶಾಪಿಂಗ್‌ ಉತ್ಸವ ಬಲು ಜೋರು   

ಶಾಪಿಂಗ್‌ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಅದರಲ್ಲೂ ನಮ್ಮ ಯುವಜನತೆ ಶಾಪಿಂಗ್‌ ಎಂದೊಡನೆ ಸಂಭ್ರಮ ಪಡುತ್ತಾರೆ. ಮಾಲ್‌ಗೆ ಬರುವ ಜನರನ್ನು ಆಕರ್ಷಿಸುವ ಸಲುವಾಗಿ ಫೋರಂ ಮಾಲ್‌ ನಗರದಲ್ಲಿ ಮೂರು ದಿನಗಳ ತಡರಾತ್ರಿ ‘ಶಾಪಿಂಗ್‌ ಮೇಳ–ನೈಟ್‌್ ಸಫಾರಿ’ಯನ್ನು ಆಯೋಜಿಸಿತ್ತು. 

   ಮಾಲ್‌ಗೆ ಪ್ರವೇಶಿಸುತ್ತಿದ್ದಂತೆಯೇ ಐಸ್‌ಕ್ರೀಂ, ಪಾಪ್‌ಕಾರ್ನ್‌, ಪಾವ್‌ ಬಾಜಿ, ಕುಲ್ಫಿ, ಚಾಟ್ಸ್‌ ಇತರೆ ಆಹಾರ ಮಳಿಗೆಗಳು ಗ್ರಾಹಕರ ಹಸಿವನ್ನು ನೀಗಿಸಿದವು. ಇನ್ನು ಕೆಲವರು ಅಲ್ಲಿಯೇ ಇದ್ದ ವ್ಯಂಗ್ಯಚಿತ್ರ ಮಳಿಗೆಯಲ್ಲಿ ತಮ್ಮ ವ್ಯಂಗ್ಯಚಿತ್ರವನ್ನು ಕಲಾವಿದರಿಂದ ಬರೆಯಿಸಿಕೊಂಡು, ನೋಡಿ ಖುಷಿಪಟ್ಟರು.

ಕರಕುಶಲ ವಸ್ತುಗಳು, ಗೃಹಪಯೋಗಿ ಹಾಗೂ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಫ್ಲೀ ಮಾರ್ಕೆಟ್‌ ಹೆಂಗಳೆಯರ ಚಿತ್ತವನ್ನು ಆಕರ್ಷಿಸಿತ್ತು ಜತೆಗೆ ಪಿವಿಆರ್‌ನಲ್ಲಿ ಹಾರರ್‌ ಸಿನಿಮಾಗಳನ್ನು ನೋಡಿ ಜನ ‘ನೈಟ್ ಸಫಾರಿ’ ಕಾರ್ಯಕ್ರಮದ ಸವಿಯುಂಡರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.