ADVERTISEMENT

ದಾಳಿಂಬೆ ಸಿಪ್ಪೆಯಿಂದ ಸೌಂದರ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST
ದಾಳಿಂಬೆ ಸಿಪ್ಪೆಯಿಂದ ಸೌಂದರ್ಯ
ದಾಳಿಂಬೆ ಸಿಪ್ಪೆಯಿಂದ ಸೌಂದರ್ಯ   

ದಾಳಿಂಬೆ ತಿನ್ನಲು ಎಷ್ಟು ರುಚಿಯೋ, ಸೌಂದರ್ಯ ವೃದ್ಧಿಗೂ ಇದು ಸಹಕಾರಿ. ಇದರ ಸಿಪ್ಪೆಯಲ್ಲಿ ಆ್ಯಂಡಿಆಕ್ಸಿಡೆಂಟ್‌ ಗುಣಗಳಿದ್ದು, ಇದನ್ನು ಬಳಸಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ವಿಶೇಷವಾಗಿ, ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಹಲವು ರೀತಿಯಲ್ಲಿ ಬಳಸಬಹುದು.

* ಒಣಗಿಸಿ ಪುಡಿ ಮಾಡಿದ ದಾಳಿಂಬೆ ಸಿಪ್ಪೆಗೆ ನೀರು ಬೆರೆಸಿ, ಕಲಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮೊಡವೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

* ಈ ಪುಡಿಯನ್ನು ರೋಸ್‌ ವಾಟರ್‌ ಮತ್ತು ಹಾಲಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿ. ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ಚರ್ಮ ಸುಕ್ಕಾಗುವುದನ್ನು ನಿಯಂತ್ರಿಸಬಹುದು.

ADVERTISEMENT

* ಇದೇ ಪುಡಿಗೆ ಸ್ವಲ್ಪ ಮೊಸರು ಹಾಕಿ ಮುಖಕ್ಕೆ ಹಚ್ಚುವುದರಿಂದ ಬಿಸಿಲಿನಿಂದ ಮುಖ ಕಪ್ಪಗಾಗುವುದನ್ನು ನಿಯಂತ್ರಿಸಬಹುದು.

* ಈ ಪುಡಿಯನ್ನು ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿ ಮಸಾಜ್‌ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

* ಎರಡು ಚಮಚ ದಾಳಿಂಬೆ ಸಿಪ್ಪೆಯ ಪುಡಿ, ಒಂದು ಚಮಚ ಜೇನುತುಪ್ಪ, ಎರಡು ಹನಿ ನಿಂಬೆರಸದ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷದ ನಂತರ ಮುಖ ತೊಳೆಯಿರಿ.

* ದಾಳಿಂಬೆ ಸಿಪ್ಪೆ, ಮೊಸರು, ಗ್ರೀನ್‌ ಟೀಯನ್ನು ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ, ಹದಿನೈದು ನಿಮಿಷ ಬಿಟ್ಟು ತೊಳೆಯುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.