ADVERTISEMENT

‘ನನ್ ಕಾಲಿಗೆ ಥ್ಯಾಂಕ್ಸ್‌’

14ರ ಪೋರ ಮ್ಯಾಕ್ಸ್‌ವೆಲ್‌ ಡೇ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:30 IST
Last Updated 16 ಮಾರ್ಚ್ 2017, 19:30 IST
‘ನನ್ ಕಾಲಿಗೆ ಥ್ಯಾಂಕ್ಸ್‌’
‘ನನ್ ಕಾಲಿಗೆ ಥ್ಯಾಂಕ್ಸ್‌’   
ಹಿಮ್ಮುಖವಾಗಿ ತಿರುಗಿದ ಪಾದಗಳನ್ನೊಮ್ಮೆ ಊಹಿಸಿಕೊಳ್ಳಿ. ಥಟ್ಟನೆ ಮನಸ್ಸನ್ನಾವರಿಸುವುದು ಕಥೆಗಳಲ್ಲಿ ಕೇಳಿದ ದೆವ್ವದ ಚಿತ್ರಣ. ಆದರೆ ಗಿನ್ನಿಸ್‌ ಪುಸ್ತಕದಲ್ಲಿ ಹೆಸರು ಗಳಿಸಲು ಅನೇಕರು ಪಾದವನ್ನು ಹಿಮ್ಮುಖವಾಗಿ ತಿರುಗಿಸುವ ಸಾಧನೆ ಮಾಡಿದ್ದಾರೆ. 
 
ಇದೀಗ ಗಿನ್ನಿಸ್‌ ಪುಸ್ತಕದಲ್ಲಿ ಹೆಸರು ಗಳಿಸಿದ್ದು 14ರ ಪೋರ ಮ್ಯಾಕ್ಸ್‌ವೆಲ್‌ ಡೇ. ಲಂಡನ್‌ನ ಈ ಹುಡುಗನಿಗೆ ಈಗಾಗಲೇ ಗಿನ್ನಿಸ್‌ನಲ್ಲಿ ಹೆಸರು ಗಳಿಸಿದ್ದ ಮೋಸೆಸ್‌ ಲೆನ್‌ಹಾಂ ಚಿತ್ರವೇ ಪ್ರೇರಣೆ. ಮೋಸೆಸ್‌ ತನ್ನ ಕಾಲುಗಳನ್ನು 120 ಡಿಗ್ರಿ ಹಿಂಭಾಗಕ್ಕೆ ತಿರುಗಿಸಿದರೆ ಮ್ಯಾಕ್ಸ್‌ವೆಲ್‌ ಬಲಗಾಲನ್ನು 157 ಡಿಗ್ರಿ ಹಾಗೂ ಎಡಗಾಲನ್ನು 143 ಡಿಗ್ರಿ ತಿರುಗಿಸಬಲ್ಲ.  
 
ಈಗ ಕಾಲನ್ನು ಹಿಮ್ಮುಖವಾಗಿ ತಿರುಗಿಸುವಲ್ಲಿ ಗಿನ್ನಿಸ್‌ ಪುಸ್ತಕದಲ್ಲಿ ಹೆಸರು ಗಳಿಸಿರುವ ಮ್ಯಾಕ್ಸ್‌ನದ್ದು ಭಲೇ ಅದೃಷ್ಟ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಕಾರಣ ಇದು ಪರಿಶ್ರಮವಿಲ್ಲದೆ ಸಂದ ಪ್ರಶಸ್ತಿ. ಮೊದಲಿನಿಂದಲೂ ಅನಾಯಾಸವಾಗಿ, ಯಾವುದೇ ನೋವು ಅನುಭವಿಸದೆ ಮ್ಯಾಕ್ಸ್‌ ಕಾಲನ್ನು ಹಿಮ್ಮುಖವಾಗಿ ತಿರುಗಿಸುತ್ತಿದ್ದ. ಮೋಸೆಸ್‌ ಅವರ ದಾಖಲೆಯ ಚಿತ್ರ ನೋಡುತ್ತಿದ್ದಂತೆ ತನ್ನ ಪ್ರತಿಭೆಯನ್ನು ಜಗತ್ತಿಗೆ ಸಾರುವ ಮನಸ್ಸು ಮ್ಯಾಕ್ಸ್‌ಗೆ ಆಯಿತಂತೆ. 
 
‘ಮೊದಲಿನಿಂದಲೂ ನಾನು ಕಾಲು ತಿರುಗಿಸುತ್ತಿದ್ದೆ. ಇದು ಅನಾಯಾಸವಾಗಿ ಬಂದ ಕಲೆ. ನನಗೆ ಹೇಗೆಯೇ ಕಾಲು ತಿರುಗಿಸಿದರೂ ನೋವಾಗುವುದಿಲ್ಲ. ಈಗ ಗಿನ್ನಿಸ್‌ನಲ್ಲಿ ಹೆಸರು ದಾಖಲಾಗಿದ್ದಕ್ಕೆ ನನ್ನ ಕಾಲಿಗೊಂದು ಥ್ಯಾಂಕ್ಸ್‌’ ಎಂದು ಹೇಳಿಕೊಂಡಿದ್ದಾರೆ ಮ್ಯಾಕ್ಸ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.