ADVERTISEMENT

ನಯನ ಜತೆ ಹೋಲಿಸಬೇಡಿ

ಮಂಜುಶ್ರೀ ಎಂ.ಕಡಕೋಳ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ನಯನ ಜತೆ ಹೋಲಿಸಬೇಡಿ
ನಯನ ಜತೆ ಹೋಲಿಸಬೇಡಿ   

‘ನಟಿ ನಯನ ತಾರಾ ಜತೆ ನನ್ನನ್ನು ಹೋಲಿಸಿಬೇಡಿ’

ಎಂದು ಹಾಗಂತ ಟಾಲಿವುಡ್‌ನ ನವನಟಿ ರಾಕುಲ್ ಪ್ರೀತ್ ಸಿಂಗ್ ಹೇಳಿಕೆ ನೀಡಿದ್ದಾರೆ. ಹಾಗಂತ ರಾಕೂಲ್ ನಯನ ವಿರುದ್ಧ ಸಿಟ್ಟಿನಿಂದ ಹೇಳಿಲ್ಲ. ಪ್ರೀತಿಯಿಂದಲೇ ಈ ತಮ್ಮ ಅಭಿಪ್ರಾಯವನ್ನು ಮಾಧ್ಯಮದ ಮಂದಿ ಹೇಳಿಕೊಂಡಿದ್ದಾರೆ.

ಉತ್ತರ ಭಾರತವರಾದ ರಾಕುಲ್ ಇತ್ತೀಚೆಗೆ ಟಾಲಿವುಡ್‌ನಲ್ಲಿ ನೆಲೆಯೂರಲು ಯತ್ನಿಸುತ್ತಿದ್ದಾರೆ. ಪ್ರಿನ್ಸ್ ಮಹೇಶ್ ಜತೆ ಈಚೆಗಷ್ಟೆ ಸ್ಪೈಡರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಮುದ್ದು ನಗುವಿನ ಈ ನಟಿ ಈಗ ಕಾರ್ತಿಗೆ ನಾಯಕಿಯಾಗಿದ್ದಾರೆ.

ADVERTISEMENT

‘ಖಾಕಿ’ ಸಿನಿಮಾದಲ್ಲಿ ಕಾರ್ತಿ ಜತೆ ಸರಿಸಮವಾಗಿ ನಟಿಸಿರುವ ರಾಕುಲ್ ಅಭಿನಯ ಕಂಡು ಅಭಿಮಾನಿಗಳು ಮತ್ತೊಬ್ಬ ನಯನ ತಾರಾ ಉದಯವಾದಳು ಎಂದು ನುಡಿದಿದ್ದರಂತೆ. ಇದನ್ನು ಕೇಳಿಸಿಕೊಂಡ ರಾಕುಲ್ ನಯನ ತಾರಾ ಅವರು ದೊಡ್ಡನಟಿ. ಅಂಥವರೊಂದಿಗೆ ನನ್ನಂಥ ಚಿಕ್ಕನಟಿಯನ್ನು ಹೋಲಿಕೆ ಮಾಡುವುದು ಸಲ್ಲದು ಎಂದು ವಿನೀತರಾಗಿಯೇ ನುಡಿದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.